ಮೈಸೂರು: ದೇವಾಲಯಕ್ಕೆ ಆಗಮಿಸುವ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ, ನಂಜನಗೂಡಿನ ನಂಜುಂಡೇಶ್ವರನ ಒಂದೇ ತಿಂಗಳಿನಲ್ಲಿ ಮತ್ತೆ ಕೋಟ್ಯಧಿಪತಿಯಾಗಿದ್ದಾನೆ.
ನಂಜನಗೂಡಿನ ತಹಶೀಲ್ದಾರ್ ಶರ್ಮಿಳಾ ದತ್ತಿ ಅವರ ಸಮ್ಮುಖದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಸಿಬ್ಬಂದಿ, ನಂಜನಗೂಡಿನ ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಿಬ್ಬಂದಿ 24 ಹುಂಡಿಗಳಲ್ಲಿನ ಹಣವನ್ನು ಎಣಿಕೆ ಮಾಡಿದ್ದಾರೆ.
ಇದನ್ನೂ ಓದಿ:ಡ್ರ್ಯಾಗನ್ ಕೈಯಲ್ಲಿ ನಲುಗಿದ ಜಾಕ್ ಮಾ: ಚೀನಾದ ಕುಬೇರನ ಪಟ್ಟಕ್ಕೆ ಕುತ್ತು..!
ವಿವಿಧ ಮುಖಬೆಲೆಯ 3,24,550 ರೂ.ನಾಣ್ಯ ಸೇರಿದಂತೆ 1,11,64,033 ಕೋಟಿ ರೂಪಾಯಿ, ಅಲ್ಲದೇ 105 ಗ್ರಾಂ ಚಿನ್ನ, 2 ಕೆಜಿ 250 ಗ್ರಾಂ ಬೆಳ್ಳಿ, 6 ವಿದೇಶಿ ಕರೆನ್ಸಿಗಳು, ನಿಷೇಧಿತ ನೋಟುಗಳಾದ 1ಸಾವಿರ ಮುಖಬೆಲೆಯ 11 ನೋಟು, 500 ಮುಖಬೆಲೆ 87 ನೋಟುಗಳನ್ನು ಭಕ್ತರು ಹಾಕಿದ್ದಾರೆ.
ಕಳೆದು ತಿಂಗಳು ಹುಂಡಿ ಏಣಿಕೆ ಮಾಡಿದಾಗಲೂ ನಂಜುಂಡೇಶ್ವರನ ಹುಂಡಿಯಲ್ಲಿ ಕೋಟ್ಯಂತರ ರೂಪಾಯಿ ಸಂಗ್ರಹವಾಗಿತ್ತು.