ಮೈಸೂರು: ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ನಂಜನಗೂಡು ದೇವಸ್ಥಾನಕ್ಕೆ ಭೇಟಿ ನೀಡಿದ್ದು ನನ್ನ ತಪ್ಪಿಂದ. ಅದಕ್ಕೆ ಶಿಕ್ಷೆ ಕೊಡಿಸಿ ಬೇಕಿದ್ರೆ, ಇಲ್ಲ ಇನ್ನು ಒಂದು ವರ್ಷ ಸರ್ವಿಸ್ ಇದೆ. ವಾಲೆಂಟರಿ ರಿಟೈರ್ಮೆಂಟ್ ತೆಗೆದುಕೊಳ್ಳುತ್ತೇನೆ ಎಂದು ದೇವಸ್ಥಾನದ ಆಡಳಿತಾಧಿಕಾರಿ ಹೇಳಿರುವ ಆಡಿಯೋವೊಂದು ವೈರಲ್ ಆಗಿದೆ.
ವಿಜಯೇಂದ್ರಗೆ ಅವಕಾಶ ಕೊಟ್ಟಿರುವುದಕ್ಕೆ ಅಧಿಕಾರಿ ಅಸಹಾಯಕತೆ ವ್ಯಕ್ತಪಡಿಸಿದ್ದು, ಆಡಳಿತಾಧಿಕಾರಿ ರವೀಂದ್ರರದ್ದು ಎನ್ನಲಾಗಿರುವ ಆಡಿಯೋ ವೈರಲ್ ಆಗಿದೆ. ಬೆಂಗಳೂರಿನ ಜುಡಿಷಿಯಲ್ ಲೇಔಟ್ನವರೆಂದು ಮಾತನಾಡಿರುವ ವ್ಯಕ್ತಿ, ವಿಜಯೇಂದ್ರಗೆ ದೇವಾಲಯದಲ್ಲಿ ಪೂಜೆ ಮಾಡಲು ಅವಕಾಶ ಹೇಗೆ ಕೊಟ್ಟಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿರುವ ದೇವಸ್ಥಾನದ ಆಡಳಿತಾಧಿಕಾರಿ, ಹೌದು, ನನ್ನಿಂದ ತಪ್ಪಾಗಿದೆ. ಅದಕ್ಕೊಂದು ಶಿಕ್ಷೆ ಇದಿಯಲ್ವಾ ಸರ್, ಅದನ್ನು ಕೊಡಿಸಿ ಎಂದಿದ್ದಾರೆ. ನನ್ನೊಬ್ಬನನ್ನೇ ಕೇಳುತ್ತೀರಿ? ಅಂತರ್ ಜಿಲ್ಲೆ ಪ್ರಯಾಣ ಮಾಡಿದ್ದಾರೆ ಅವರು. ಅದನ್ನು ಕೇಳಿ ಸರ್ ಎಂದಿದ್ದಾರೆ.