ಮೈಸೂರು: ದಕ್ಷಿಣ ಕಾಶಿ ನಂಜನಗೂಡಿನ ಕಪಿಲ ನದಿಯಲ್ಲಿ ಶ್ರೀಕಂಠೇಶ್ವರ ಮತ್ತು ಪಾರ್ವತಿ ದೇವಿಯ ತೆಪ್ಪೋತ್ಸವ ವಿಜೃಂಭಣೆಯಿಂದ ಜರುಗಿತು.
ನಂಜನಗೂಡಿನಲ್ಲಿ ಮಾರ್ಚ್ 26 ರಂದು ಜರುಗಿದ ಗೌತಮೀ ಪಂಚ ಮಹಾರಥೋತ್ಸವದ ನಂತರ, ಭಾನುವಾರ ಸಂಜೆ ದಕ್ಷಿಣ ಕಾಶಿ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಪಕ್ಕದಲ್ಲಿ ಹರಿಯುವ ಕಪಿಲ ನದಿಯ ಸ್ನಾನ ಘಟ್ಟದ ಬಳಿ ಇರುವ ಮಂಟಪಕ್ಕೆ ಶ್ರೀಕಂಠೇಶ್ವರ ಹಾಗೂ ಪಾರ್ವತಿ ಅಮ್ಮನವರ ಉತ್ಸವ ಮೂರ್ತಿಗಳನ್ನು ಅಲಂಕೃತ ದೋಣಿಯಲ್ಲಿ ಇಟ್ಟು ತೆಪ್ಪೋತ್ಸವ ನಡೆಸಲಾಯಿತು.