ಮೈಸೂರು:ನಂಜನಗೂಡಿನ ಜ್ಯುಬಿಲೆಂಟ್ ಕಂಪನಿ ಚೀನಾದಿಂದ ಕಂಟೈನರ್ ಬಂದಿರುವುದನ್ನು ಒಪ್ಪಿಕೊಂಡಿದೆ ಎಂದು ಸ್ಥಳೀಯ ನಂಜನಗೂಡು ಶಾಸಕ ಈಟಿವಿ ಭಾರತ್‌ಗೆ ತಿಳಿಸಿದ್ದಾರೆ.
ಚೀನಾದಿಂದ ಕಂಟೈನರ್ ಬಂದಿರೋದನ್ನ ಒಪ್ಪಿಕೊಂಡ ಜ್ಯುಬಿಲೆಂಟ್.. ನಂಜನಗೂಡು ಶಾಸಕರ ಸಂದರ್ಶನ
ಕೊರೊನಾ ಸೋಂಕಿತರ ಹಾಟ್‌ಸ್ಪಾಟ್ ಆಗಿರುವ ಮೈಸೂರು ಜಿಲ್ಲೆಯ ನಂಜನಗೂಡಿನ ಜ್ಯುಬಿಲೆಂಟ್ ಕಾರ್ಖಾನೆ ನಿನ್ನೆ ಸಂಜೆ 5 ಗಂಟೆಗೆ ಪತ್ರಿಕಾ ಪ್ರಕಟಣೆ ರಿಲೀಸ್ ಮಾಡಿದೆ. ಅದರಲ್ಲಿ ಚೀನಾದಿಂದ ಕಂಟೈನರ್ ಬಂದಿದ್ದು ನಿಜ ಎಂದು ಒಪ್ಪಿಕೊಂಡಿದೆ. ಆದರೆ, ಚೀನಾದ ಯಾವ ಪ್ರಾಂತ್ಯದಿಂದ ಬಂದಿದೆ ಎಂಬುದನ್ನು ಹೇಳಿಲ್ಲ.
ಕೊರೊನಾ ಸೋಂಕಿತರ ಹಾಟ್‌ಸ್ಪಾಟ್ ಆಗಿರುವ ಮೈಸೂರು ಜಿಲ್ಲೆಯ ನಂಜನಗೂಡಿನ ಜ್ಯುಬಿಲೆಂಟ್ ಕಾರ್ಖಾನೆ ನಿನ್ನೆ ಸಂಜೆ 5 ಗಂಟೆಗೆ ಪತ್ರಿಕಾ ಪ್ರಕಟಣೆ ರಿಲೀಸ್ ಮಾಡಿದೆ. ಅದರಲ್ಲಿ ಚೀನಾದಿಂದ ಕಂಟೈನರ್ ಬಂದಿದ್ದು ನಿಜ ಎಂದು ಒಪ್ಪಿಕೊಂಡಿದೆ. ಆದರೆ, ಚೀನಾದ ಯಾವ ಪ್ರಾಂತ್ಯದಿಂದ ಬಂದಿದೆ ಎಂಬುದನ್ನು ಹೇಳಿಲ್ಲ, ಇದನ್ನು ಹೇಳಬೇಕು ಜೊತೆಗೆ ಜ್ಯುಬಿಲೆಂಟ್ ಕಾರ್ಖಾನೆಯ ಬಗ್ಗೆ ನಾನು ಆರೋಪ ಮಾಡುವವರೆಗೂ ಜಿಲ್ಲಾಧಿಕಾರಿ ಮಾಹಿತಿ ಕೊಟ್ಟಿಲ್ಲ, ಏಕೆ ಮುಚ್ಚಿಟ್ಟರು ಗೊತ್ತಿಲ್ಲ ಎಂದರು ಶಾಸಕ ಹರ್ಷವರ್ಧನ್.
ಜ್ಯುಬಿಲೆಂಟ್ ಕಾರ್ಖಾನೆಯಿಂದ ನಂಜನಗೂಡು ಕ್ಷೇತ್ರಕ್ಕೆ ಇಷ್ಟೊಂದು ತೊಂದರೆಯಾಗಿದೆ. ಆದರೂ ಕಂಪನಿ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಪ್ರಶ್ನಿಸಿದ್ರು. ಜೊತೆಗೆ ನನ್ನ ಧ್ವನಿ ಅಡಗಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ್ರು. ಜೊತೆಗೆ ಈ ಹಿಂದೆ ಸಹ ಈ ಕಾರ್ಖಾನೆ ಕೆಲವು ನಿರ್ಬಂಧ ಹಾಗೂ ಕಾಯ್ದೆಗಳನ್ನು ಉಲ್ಲಂಘಿಸಿದೆ ಎಂದು ಜಿಲ್ಲಾ ಪರಿಸರ ಮಾಲಿನ್ಯ ಇಲಾಖೆಗೆ ಸಹ ದೂರು ನೀಡಿದ್ದೆ. ಆದರೂ ಆ ಅಧಿಕಾರಿಗಳೇ ಇವರ ಜೊತೆ ಶಾಮೀಲಾಗಿದ್ದಾರೆ ಎಂದ ಶಾಸಕರು, 2018ರಲ್ಲಿ ಜ್ಯುಬಿಲೆಂಟ್ ಕಾರ್ಖಾನೆಗೆ ಅಮೆರಿಕಾದಿಂದ ನೋಟಿಸ್ ಬಂದಿತ್ತು ಎಂದು ಬಿಜೆಪಿ ಶಾಸಕ ಹರ್ಷವರ್ಧನ್ ಈಟಿವಿ ಭಾರತ್‌ಗೆ ನೀಡಿದ ವಿಶೇಷ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.