ಮೈಸೂರು : ಕೊರೊನಾ ಎರಡನೇ ಆರ್ಭಟ ಮನುಷ್ಯರನ್ನು ಚಿಂತೆಗೀಡು ಮಾಡಿದೆ. ನದಿಗಳು ಮಾತ್ರ ನಿಷ್ಕಲ್ಮಶವಾಗಿ ಹರಿಯುವಂತಾಗಿದೆ.
ಓದಿ: ಪಾಪ ಕಳೆಯಲಿ ಎಂದು 'ಕಪಿಲೆ' ಒಡಲನ್ನು ಹಾಳು ಮಾಡುತ್ತಿದ್ದಾರೆ ಭಕ್ತರು!
ಮೈಸೂರು : ಕೊರೊನಾ ಎರಡನೇ ಆರ್ಭಟ ಮನುಷ್ಯರನ್ನು ಚಿಂತೆಗೀಡು ಮಾಡಿದೆ. ನದಿಗಳು ಮಾತ್ರ ನಿಷ್ಕಲ್ಮಶವಾಗಿ ಹರಿಯುವಂತಾಗಿದೆ.
ಓದಿ: ಪಾಪ ಕಳೆಯಲಿ ಎಂದು 'ಕಪಿಲೆ' ಒಡಲನ್ನು ಹಾಳು ಮಾಡುತ್ತಿದ್ದಾರೆ ಭಕ್ತರು!
ನಂಜನಗೂಡು ನಂಜುಂಡೇಶ್ವರ ದೇವಸ್ಥಾನದ ಸಮೀಪದಲ್ಲಿರುವ ಕಪಿಲೆ ನದಿ ನಿಷ್ಕಲ್ಮಶವಾಗಿ ಹರಿಯುತ್ತಿದ್ದಾಳೆ. ನಂಜುಂಡೇಶ್ವರ ದೇವಸ್ಥಾನ ಕಳೆದ 25 ದಿನಗಳಿಂದ ಮುಚ್ಚಿರುವುದರಿಂದ ಭಕ್ತಾದಿಗಳ ಸಂಖ್ಯೆ ಗಣನೀಯವಾಗಿ ಕುಸಿದಿದೆ.
ಅಲ್ಲದೆ ಕೊರೊನಾ ಅಲೆ ಭೀತಿಯಿಂದ ಸ್ಥಳೀಯರು ಕೂಡ ನದಿ ಕಡೆ ಸುಳಿಯದೇ ಇರುವುದರಿಂದ ಕಪಿಲಾ ನದಿ ನಿಷ್ಕಲ್ಮಶ ಹಾಗೂ ಪರಿಶುದ್ಧವಾಗಿ ಹರಿಯುವಂತಾಗಿದೆ.
ಕೊರೊನಾ ಮೊದಲನೇ ಅಲೆ ಕೊಂಚ ಕಡಿಮೆಯಾದಾಗ ಭಕ್ತಾದಿಗಳ ಸಂಖ್ಯೆ ಏರಿತ್ತು. ಇದರಿಂದ ಮುಡಿ ಕೊಡಲು ಬರುವವರು ಹಾಗೂ ಭಕ್ತಾದಿಗಳು ಸ್ನಾನ ಮಾಡಲು ಬಂದಾಗ, ಬಟ್ಟೆ ಹಾಗೂ ಶ್ಯಾಂಪೂ ಕವರ್‌ಗಳನ್ನು ಅಲ್ಲಿಯೇ ಬಿಸಾಡಿ ತೆರಳುತ್ತಿದ್ದರು. ಆದರೆ, 25 ದಿನಗಳಿಂದ ನದಿಯಲ್ಲಿ ತ್ಯಾಜದ ಪ್ರಮಾಣ ಕಡಿಮೆಯಾಗಿದೆ.