ಮೈಸೂರು:ಮಾರ್ಗಸೂಚಿ ಫಲಕದಲ್ಲಿ ಅಕ್ಷರಗಳನ್ನು ತಪ್ಪುತಪ್ಪಾಗಿ ಮುದ್ರಿಸಿದ್ದ ಮಹಾನಗರ ಪಾಲಿಕೆ, ಸಾರ್ವಜನಿಕರ ಟೀಕೆಗಳ ಪರಿಣಾಮ ಎಚ್ಚೆತ್ತುಕೊಂಡಿದೆ.
ಕೊನೆಗೂ ಮಾರ್ಗಸೂಚಿ ಫಲಕ ಸರಿಪಡಿಸಿದ ಮೈಸೂರು ನಗರಪಾಲಿಕೆ - ಮಾರ್ಗಸೂಚಿ ಫಲಕದಲ್ಲಿ ಅಕ್ಷರಗಳನ್ನ ಸರಿ ಪಡಿಸಿದ ಮೈಸೂರು ನಗರ ಪಾಲಿಕೆ,
ಮಾರ್ಗಸೂಚಿ ಫಲಕದಲ್ಲಿ ತಪ್ಪಾಗಿ ಅಕ್ಷರಗಳನ್ನು ಮುದ್ರಿಸಿದ ಮೈಸೂರು ನಗರ ಪಾಲಿಕೆ ಎಚ್ಚೆತ್ತುಕೊಂಡು ಸರಿಪಡಿಸಿದೆ.

ಕೊನೆಗೂ ಮಾರ್ಗಸೂಚಿ ಫಲಕದಲ್ಲಿ ಅಕ್ಷರಗಳನ್ನ ಸರಿ ಪಡಿಸಿದ ನಗರಪಾಲಿಕೆ
ನಜರ್ಬಾದ್ನಲ್ಲಿ ಮಹಾನಗರ ಪಾಲಿಕೆಯು ಮಾರ್ಗಸೂಚಿ ಫಲಕಗಳನ್ನು ಅಳವಡಿಸಿ 'ಮಧ್ಯಪಾನ ಮಾಡಿ ವಾಹನ ಚಲಾಹಿಸಬೇಡ' ಎಂದು ತಪ್ಪಾಗಿ ಬರೆಯಲಾಗಿತ್ತು. ಅಲ್ಲದೇ ಮಾರ್ಗಸೂಚಿಯಲ್ಲಿ ಇಂಗ್ಲಿಷ್ನಲ್ಲಿಯೇ ವಿಳಾಸ ತೋರಿಸಲಾಗಿತ್ತು. ಈ ಸಂಬಂಧ ‘ಮಾರ್ಗಸೂಚಿ ಫಲಕದಲ್ಲಿ ಅಕ್ಷರಗಳನ್ನು ತಪ್ಪಾಗಿ ಮುದ್ರಿಸಿದ ಮಹಾನಗರ ಪಾಲಿಕೆ’ ಎಂಬ ಶೀರ್ಷಿಕೆಯಡಿ 'ಈಟಿವಿ ಭಾರತ' ಸುದ್ದಿ ಬಿತ್ತರಿಸಿತ್ತು.
ಈ ವರದಿಯಿಂದ ಎಚ್ಚೆತ್ತ ನಗರ ಪಾಲಿಕೆ 'ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ' ಎಂದು ಅಕ್ಷರಗಳನ್ನು ಸರಿಪಡಿಸಿ ಹಾಗೂ ವಿಳಾಸವನ್ನು ಕನ್ನಡ ಹಾಗೂ ಇಂಗ್ಲಿಷ್ನಲ್ಲಿ ಮುದ್ರಿಸಿದೆ.