ಕರ್ನಾಟಕ

karnataka

ETV Bharat / state

ಹಣದ ಮೇಲೆ ರಾಜಕೀಯ ಮಾಡೋದು ಜೆಡಿಎಸ್​​ನವರು: ನಳಿನ್ ಕುಮಾರ್ ಕಟೀಲ್ - nalin kumar katil reaction on hdk statement

ಅರುಣ್​ ಸಿಂಗ್​ ವಸೂಲಿಗೆ ಬಂದವರು ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್​, ಅದು ಜೆಡಿಎಸ್​ನವರ ಸಂಸ್ಕೃತಿ, ನಮ್ಮದಲ್ಲ ಎಂದು ಟಾಂಗ್​ ನೀಡಿದ್ದಾರೆ.

nalin kumar katil statement against JDS
ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ

By

Published : Sep 1, 2021, 4:46 PM IST

ಮೈಸೂರು:ಜೆಡಿಎಸ್​​ನವರು ಹಣದ ಮೇಲೆ ರಾಜಕೀಯ ಮಾಡುವವರು. ಇದು ಅವರ ಸಂಸ್ಕೃತಿ ಎಂದು ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿರುಗೇಟು ನೀಡಿದ್ದಾರೆ.

ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ

ಇಂದು ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ವಸೂಲಿಗೆ ಬಂದವರು ಎಂಬ ಹೆಚ್​​ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿದರು. ಅರುಣ್ ಸಿಂಗ್ ಸೂಟ್ ಕೇಸ್ ತೆಗೆದುಕೊಳ್ಳಲು ಬಂದವರು ಎಂಬುದು ನಮಗಲ್ಲ, ಅದು ಜೆಡಿಎಸ್ ಸಂಸ್ಕೃತಿ. ಜೆಡಿಎಸ್​ನವರು ರಾಜ್ಯ ಆಳಿದವರು, ದೇಶ ಆಳಿದವರು‌. ಅವರಿಗೆ ಎಲುಬು, ನಾಲಿಗೆ ಇದ್ದಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ವ್ಯಂಗ್ಯವಾಡಿದರು.

ನಿರಂತರವಾದ ಬೆಲೆ ಏರಿಕೆ ಕುರಿತು ಪ್ರತಿಕ್ರಿಯಿಸಿ, ಯುಪಿಎ ಕಾಲಘಟ್ಟದ ಬೆಲೆ ಏರಿಕೆಯೇ ಇಂದಿನ ಬೆಲೆ ಏರಿಕೆ.‌ ಬೆಲೆ ಏರಿಕೆ ನಿಯಂತ್ರಣಕ್ಕೆ ನಮ್ಮ ಸರ್ಕಾರ ಸಂಪೂರ್ಣವಾಗಿ ಸಿದ್ಧವಿದೆ, ಅದಕ್ಕಾಗಿ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರವಾಗಿ ಮಾತನಾಡಿ, ನಮ್ಮ ನೆಲ, ನಮ್ಮ ಜಲ, ನಮ್ಮ ಭಾಷೆಗೆ ಕಟಿಬದ್ಧವಾಗಿ ಭಾರತೀಯ ಜನತಾ ಪಾರ್ಟಿ ಇದೆ ಎಂದರು.

ಬಿಜೆಪಿಯವರು ನಮ್ಮ ಮನೆ ಬಾಗಿಲಿಗೆ ಬಂದಿದ್ದಾರೆ ಎಂಬ ಹೇಳಿಕೆ ಪ್ರತಿಕ್ರಿಯೆ ನೀಡಿ, ಜೆಡಿಎಸ್​ನಂತೆ ಭಾರತೀಯ ಜನತಾ ಪಾರ್ಟಿ ಮಾತನಾಡುವುದಿಲ್ಲ. ಜೆಡಿಎಸ್ ಪರಿಸ್ಥಿತಿ ಏನು ಎಂಬುದು ರಾಜ್ಯದ ಜನತೆಗೆ ಗೊತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ಇದನ್ನೂ ಓದಿ:ಕಾಂಗ್ರೆಸ್ ಜಾರಿಗೆ ತಂದ ಯೋಜನೆಗಳನ್ನು ಖಾಸಗೀಕರಣಗೊಳಿಸಿದ್ದೇ ಬಿಜೆಪಿಯ ಸಾಧನೆ: ಸಚಿನ್ ಪೈಲಟ್

ABOUT THE AUTHOR

...view details