ಕರ್ನಾಟಕ

karnataka

ETV Bharat / state

ಕಾಂಗ್ರೆಸ್​ನ ಎಲ್ಲಾ ನಾಟಕಗಳನ್ನು ಬಲ್ಲ ಏಕೈಕ ನಾಯಕ ಸಿದ್ದರಾಮಯ್ಯ: ನಳಿನ್​ ಕುಮಾರ್ ಕಟೀಲ್ - ಕಟೀಲ್​ ವಿಶ್ವಾಸ

ಸಿದ್ದರಾಮಯ್ಯ, ಕುಮಾರಣ್ಣನನಿಂದ ರಾಜ್ಯ ಅಭಿವೃದ್ಧಿ ಆಗಿಲ್ಲ. ಬದಲಾಗಿ ಯಡಿಯೂರಪ್ಪನವರಿಂದ ಆಗಿದೆ-ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್

Nalin Kumar Kateel
ನಳಿನ್​ ಕುಮಾರ್ ಕಟೀಲ್

By

Published : Oct 29, 2022, 8:29 PM IST

ಮೈಸೂರು: ಸಿದ್ದರಾಮಯ್ಯ ರಾಜ್ಯ ಕಂಡ ಖಳನಾಯಕ ರಾಜಕಾರಣಿ ಹಾಗೂ ಗೋಮುಖ ವ್ಯಾಘ್ರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದರು.

ನಂಜನಗೂಡು ತಾಲೂಕಿನ ಮಹದೇವನಗರದ ಜಯಲಕ್ಷ್ಮಿ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಕಾರ್ಯಕರ್ತರ ಸಂಕಲ್ಪ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಮನುಷ್ಯರಿಗೆ ಆ್ಯಂಬುಲೆನ್ಸ್ ನೀಡಿಲ್ಲ. ಆದರೆ ಬಿಜೆಪಿ ಸರ್ಕಾರ ಗೋವುಗಳಿಗೂ ಆ್ಯಂಬುಲೆನ್ಸ್ ನೀಡಿದೆ. ಸಿದ್ದರಾಮಯ್ಯ ಅವರಿಗೆ ಖರ್ಗೆ, ಪರಮೇಶ್ವರ ಅವರ ಶಾಪವಿದೆ. ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯಗೆ ಸೀಟ್​ ಎಂದು ಟೀಕಿಸಿದರು.

ಅನೈತಿಕ ಸಂಬಂಧ ಇಟ್ಟುಕೊಂಡ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆ ಮಾಡಿ ರಾಜ್ಯದ ಜನರಿಗೆ ದ್ರೋಹ ಮಾಡಿತ್ತು. ಕರ್ನಾಟಕದ ಜನರಲ್ಲಿ ಕಣ್ಣೀರು ಬರಿಸಿದ್ದು ಕುಮಾರಣ್ಣ. ಸಿದ್ದರಾಮಯ್ಯ, ಕುಮಾರಣ್ಣನನಿಂದ ರಾಜ್ಯ ಅಭಿವೃದ್ಧಿ ಆಗಿಲ್ಲ. ಬದಲಾಗಿ ಯಡಿಯೂರಪ್ಪನವರಿಂದ ಆಗಿದೆ. ಕಾಂಗ್ರೆಸ್​​ನ ಆಡಳಿತದಲ್ಲಿ ಬರ ಬಂದಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ನೆರೆ ಬಂದಿದೆ ಎಂದರು.

ಸಿದ್ದರಾಮಯ್ಯ ವಿರುದ್ಧ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ

ಕಾಂಗ್ರೆಸ್ ಸರ್ಕಾರ ಇದ್ದಾಗ ನಂಜನಗೂಡಿಗೆ ಕೊಟ್ಟ ಹಣ ಎಷ್ಟು ಅಂತಾ? ತಾಕತ್ತಿದ್ದಾರೆ ಸಿದ್ದರಾಮಯ್ಯ ಅವರು ಹೇಳಬೇಕು. ಸಿದ್ದರಾಮಯ್ಯನವರ ಕೊಡುಗೆ ನಂಜನಗೂಡಿಗೆ ಏನೂ ಇಲ್ಲ. ನಂಜನಗೂಡಿಗೆ ಡಾ. ರಾಜ್ ಕುಮಾರ್ ಮತ್ತು ಅಪ್ಪು ಕೊಡುಗೆ ಇದೆ ಎಂದರು.

ರಾಹುಲ್ ಗಾಂಧಿ ಕಾಲಿಟ್ಟ ಮೇಲೆ ನಂಜನಗೂಡು 20 ವರ್ಷಗಳ ಕಾಲ ಗೆಲ್ಲುವುದಿಲ್ಲ. ಜೋಡೋ ಮೂಲಕ ರಾಹುಲ್ ಗಾಂಧಿ ಕ್ಷೇತ್ರ ಹುಡುಗಾಟದಲ್ಲಿದ್ದಾರೆ. ಕಲ್ಯಾಣ ಕರ್ನಾಟಕದಿಂದ ಸಂಕಲ್ಪ ಯಾತ್ರೆ ಪ್ರಾರಂಭವಾಗಿದೆ. ಮತಗಟ್ಟೆಯನ್ನು ಗಟ್ಟಿ ಮಾಡಬೇಕು ಎಂದು ನನ್ನ ತಂಡ ಪಣತೊಟ್ಟಿದೆ. ಮುಂದಿನ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲುತ್ತೇವೆ ಎಂದು ಕಟೀಲ್​ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ:ಖರ್ಗೆ ಅಧ್ಯಕ್ಷರಾದ ಮೇಲೆ ಸಿದ್ದರಾಮಯ್ಯಗೆ ಸೀಟ್ ಇಲ್ಲ: ನಳಿನ್​ ಕುಮಾರ್​ ಕಟೀಲ್​

ABOUT THE AUTHOR

...view details