ಮೈಸೂರು: ನಂಜನಗೂಡಿನ ಐತಿಹಾಸಿಕ ಪಂಚಮಹಾರಥೋತ್ಸವ ರದ್ದು ಮಾಡಿರುವ ಹಿನ್ನೆಲೆ ನಂಜನಗೂಡು ಪಟ್ಟಣದ ವ್ಯಾಪಾರಿಗಳು ಸ್ವಯಂ ಘೋಷಿತ ಬಂದ್ ಆಚರಿಸಿದ್ದಾರೆ.
ನಂಜನಗೂಡು ತಾಲೂಕಿನ ನಂಜುಂಡೇಶ್ವರನ ದೇವಸ್ಥಾನದ ಪಂಚ ಮಹಾರಥೋತ್ಸವವನ್ನು ಮಾ.26ರಂದು ನಿಗದಿ ಮಾಡಲಾಗಿತ್ತು. ಆದರೆ, ಕೊರೊನಾ ಆರ್ಭಟ ಹೆಚ್ಚಾಗುತ್ತಿರುವುದರಿಂದ ಜಾತ್ರೆ ರದ್ದು ಮಾಡಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶ ಹೊರಡಿಸಿದ್ದಾರೆ. ಇತ್ತ ಜಾತ್ರೆ ನಡೆಸಲು ಅನುಮತಿ ನೀಡಬೇಕು ಎಂದು ನಂಜನಗೂಡಿನ ಭಕ್ತರು ಜಿಲ್ಲಾ ಉಸ್ತುವಾರಿ ಸಚಿವರ ಬಳಿ ಮನವಿ ಮಾಡಿದ್ದಾರೆ.