ಮೈಸೂರು:ತಾನು ಸ್ನಾನ ಮಾಡುವ ವಿಡಿಯೋ ತೆಗೆದು ಯುವಕನೋರ್ವ ಬ್ಲ್ಯಾಕ್ಮೇಲ್ ಮಾಡುತ್ತಿದ್ದು, ಈ ಯುವಕನನ್ನು ಬಂಧಿಸುವಂತೆ ನೊಂದ ಮಹಿಳೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ, ಇದುವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದೂ 'ಈಟಿವಿ ಭಾರತ'ಕ್ಕೆ ಸಂತ್ರಸ್ತೆ ತಿಳಿಸಿದ್ದಾರೆ.
ನಗರದ ನಿವಾಸಿಯಾದ ಈ ಮಹಿಳೆಯು 'ಈಟಿವಿ ಭಾರತ' ಜೊತೆ ಮಾತನಾಡಿ, ನಾನು ಸ್ನಾನ ಮಾಡುವ ವಿಡಿಯೋವನ್ನು ಪ್ರಮೋದ್ ಎಂಬ ಯುವಕ ತೆಗೆದಿದ್ದಾನೆ. ಕಳೆದ ಒಂದೂವರೆ ವರ್ಷದಿಂದ ನನ್ನನ್ನು ಎಲ್ಲ ರೀತಿಯಲ್ಲೂ ಬ್ಲ್ಯಾಕ್ಮೇಲ್ ಮಾಡಿದ್ದ. ಈ ವಿಚಾರ ನನ್ನ ಗಂಡನಿಗೆ ಗೊತ್ತಾದರೆ ತೊಂದರೆಯಾಗುತ್ತದೆ ಎಂದು ಸುಮ್ಮನಿದ್ದೆ. ಆದರೆ, ಒಂದು ತಿಂಗಳ ಹಿಂದೆ ವಿಪರೀತ ಕಾಟ ಕೊಡಲು ಶುರು ಮಾಡಿದ್ದಾನೆ ಎಂದು ಮಹಿಳೆ ಅಳಲು ತೋಡಿಕೊಂಡಿದ್ದಾರೆ.