ಮೈಸೂರು: ನಗರದ ಹಿನಕಲ್ ನಾಯಕರ ಬೀದಿಯಲ್ಲಿ ಆಸ್ತಿ ವಿಚಾರಕ್ಕಾಗಿ ಸಂಬಂಧಿಕರ ನಡುವೆ ಗಲಾಟೆ ನಡೆದು ಮಹಿಳೆಯ ಕತ್ತಿಗೆ ಚಾಕು ಇರಿಯಲಾಗಿತ್ತು. ಈ ದೃಶ್ಯವನ್ನ ಸ್ಥಳೀಯರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.
ದಾಸನಾಯಕ ಹಾಗೂ ಗೋವಿಂದನಾಯಕ ಎಂಬುವರ ನಡುವೆ ಆಸ್ತಿ ವಿಚಾರವಾಗಿ ಆಗಾಗ ಗಲಾಟೆ ನಡೆಯುತ್ತಿತ್ತು. ಶುಕ್ರವಾರ ಎರಡು ಕುಟುಂಬಗಳ ನಡುವೆ ನಡೆದ ಗಲಾಟೆ ತಾರಕಕ್ಕೇರಿತ್ತು.
ಈ ವೇಳೆ ದಾಸನಾಯಕನ ಪತ್ನಿ ಸಾಕಮ್ಮಳನ್ನು ತಳ್ಳಾಡಿ ಕತ್ತಿಗೆ ಚಾಕು ಇರಿಯಲಾಗಿತ್ತು. ಘಟನೆಯ ದೃಶ್ಯವನ್ನು ಸ್ಥಳೀಯರು ತಮ್ಮ ಮನೆ ಮೇಲೆ ನಿಂತು ವಿಡಿಯೋ ಮಾಡಿದ್ದಾರೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮನು, ಗೋವಿಂದನಾಯಕ, ಕಿರಣ್, ಲಕ್ಷ್ಮಿ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಪರಾರಿಯಾಗಿರುವ ಮನೋಜ್ ಬಂಧನಕ್ಕೆ ವಿಜಯನಗರ ಠಾಣೆ ಪೊಲೀಸರು ಬಲೆ ಬೀಸಿದ್ದಾರೆ.
ಓದಿ: ಮೈಸೂರು: ಆಸ್ತಿ ವಿಚಾರಕ್ಕೆ ಗಲಾಟೆ, ಮಹಿಳೆಯ ಬರ್ಬರ ಹತ್ಯೆ