ಕರ್ನಾಟಕ

karnataka

ETV Bharat / state

ಸೇವಾ ನಿವೃತ್ತಿಯ ದಿನವೇ ಕೊಲೆಯಾದ ಮೈಸೂರು ವಿವಿ ನೌಕರ - ನಿವೃತ್ತಿ ದಿನವೇ ಮೈಸೂರು ವಿವಿ ಸಿಬ್ಬಂದಿ ಕೊಲೆ

ಮೈಸೂರಿನ ವಿದ್ಯಾರಣ್ಯಪುರಂ ಬೂತಾಳೆ ಮೈದಾನದಲ್ಲಿ ಮೈಸೂರು ವಿವಿಯ ನೌಕರರೊಬ್ಬರು ಬರ್ಬರವಾಗಿ ಕೊಲೆಯಾಗಿದ್ದಾರೆ.

ಮೈಸೂರು
ಮೈಸೂರು

By

Published : Jul 1, 2022, 3:45 PM IST

ಮೈಸೂರು: ನಿವೃತ್ತಿಯಾಗುವ ದಿನದಂದೇ ಮೈಸೂರು ವಿವಿಯ ನೌಕರರೊಬ್ಬರು ಭೀಕರವಾಗಿ ಕೊಲೆಯಾಗಿರುವ ಘಟನೆ ವಿದ್ಯಾರಣ್ಯಪುರಂ ಬೂತಾಳೆ ಮೈದಾನದಲ್ಲಿ ನಡೆದಿದೆ.

ವಿವಿಯ ಇಂಜಿನಿಯರಿಂಗ್ ವಿಭಾಗದ ಕೃಷ್ಣೇಗೌಡ (60) ಮೃತ ದುರ್ದೈವಿ. ಗುರುವಾರ ಬೆಳಗ್ಗೆ 5 ಗಂಟೆಯ ಸಮಯದಲ್ಲಿ ವಿದ್ಯಾರಣ್ಯಪುರಂ ಬಳಿ ಇರುವ ಬೂತಾಳೆ ಮೈದಾನದಲ್ಲಿ ವಾಯುವಿಹಾರಕ್ಕೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ದುಷ್ಕರ್ಮಿಗಳು ಕತ್ತು ಕುಯ್ದು ಕೊಲೆ ಮಾಡಿದ್ದಾರೆ.

ರಕ್ತದ ಮಡುವಿನಲ್ಲಿದ್ದ ಕೃಷ್ಣಗೌಡರನ್ನು ಕಂಡ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು ಎಂದು ತಿಳಿದುಬಂದಿದೆ. ವಿದ್ಯಾರಣ್ಯಪುರಂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ:ಬೆಂಗಳೂರನ್ನು ಅಂತಾರಾಷ್ಟ್ರೀಯ ಮಟ್ಟದ ನಗರವನ್ನಾಗಿ ಮಾಡುತ್ತೇವೆ: ಸಿಎಂ ಬೊಮ್ಮಾಯಿ

For All Latest Updates

ABOUT THE AUTHOR

...view details