ಮೈಸೂರು: ಐರ್ಲೆಂಡ್ನ ಡುಬ್ಲಿನ್ನಲ್ಲಿ ತಾಯಿ ಮತ್ತು ಇಬ್ಬರು ಮಕ್ಕಳು ಕೊಲೆ ಪ್ರಕರಣದ ಸಂಬಂಧ ಅಲ್ಲಿನ ಪೊಲೀಸರ ಜೊತೆ ಸಂಪರ್ಕದಲ್ಲಿದ್ದೇವೆ. ಮೃತರ ಕುಟುಂಬದವರ ಸಂಪರ್ಕ ಸಂಖ್ಯೆಯನ್ನು ನೀಡಿದ್ದೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಮಾಹಿತಿ ನೀಡಿದರು.
'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ಐರ್ಲೆಂಡ್ನ ಡುಬ್ಲಿನ್ನಲ್ಲಿ ನಡೆದ, ಜಿಲ್ಲೆಯ ಬೆಟ್ಟದಪುರ ಹಲಗನಹಳ್ಳಿ ಗ್ರಾಮದ ಮಹಿಳೆ ಸೀಮಾ ಬಾನು ಮತ್ತು ಇಬ್ಬರು ಮಕ್ಕಳ ಕೊಲೆ ಪ್ರಕರಣವನ್ನು ಡುಬ್ಲಿನ್ ಪೊಲೀಸ್ ಅಧಿಕಾರಿ ರೇಚರ್ ಎಂಬವರು ತನಿಖೆ ಮಾಡುತ್ತಿದ್ದಾರೆ. ನಾವು ಭಾರತೀಯ ರಾಯಭಾರ ಕಚೇರಿ ಜೊತೆ ಸಂಪರ್ಕದಲ್ಲಿದ್ದೇವೆ. ಮೃತರ ಕುಟುಂಬಸ್ಥರ ಸಂಪರ್ಕ ಸಂಖ್ಯೆಯನ್ನು ಅಲ್ಲಿನ ಪೊಲೀಸರಿಗೆ ನೀಡಿದ್ದೇವೆ ಎಂದು ತಿಳಿಸಿದರು.