ಮೈಸೂರು:ಕೊರೊನಾದಿಂದ ಕಳೆದ ಕೆಲವು ತಿಂಗಳಿನಿಂದ ಸ್ಥಗಿತಗೊಂಡಿದ್ದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಸಫಾರಿ ಮತ್ತೆ ಇಂದಿನಿಂದ ಶುರುವಾಗಿದೆ.
ಕೊರೊನಾ ಲಾಕ್ಡೌನ್ ನಿಂದ ಕಳೆದ 7 ತಿಂಗಳಿನಿಂದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿತ್ತು. ಆದರೆ, ಈಗ ಸರ್ಕಾರ ಅನ್ಲಾಕ್ ಮಾಡಿದ್ದು, ಕೆಲವು ಕೋವಿಡ್ ನಿಯಮಗಳನ್ನನುಸರಿಸುವ ಮೂಲಕ ಇಂದಿನಿಂದ ನಾಗರಹೊಳೆಗೆ ಪ್ರವಾಸಿಗರು ಭೇಟಿ ನೀಡಲು ಅಧಿಕೃತವಾಗಿ ಅನುಮತಿ ನೀಡಲಾಗಿದೆ.
ಅರಣ್ಯ ಮತ್ತು ವನ್ಯಜೀವಿಗಳ ಮೇಲೆ ಒತ್ತಡ ಕಡಿಮೆ ಮಾಡಲು ಹಾಗೂ ಸಫಾರಿ ನೆಪದಲ್ಲಿ ಕೆಲ ಪ್ರವಾಸಿಗರು ಕಾಡಿನಲ್ಲೇ ಅಡ್ಡಾಡುವ ಪ್ರವೃತ್ತಿಗೆ ಕಡಿವಾಣ ಹಾಕಲು 3 ವರ್ಷದ ಹಿಂದೆ ವೀರನಹೊಸಹಳ್ಳಿ ಹಾಗೂ ನಾಣಚ್ಚಿಗೇಟ್ ನಿಂದ ಸಫಾರಿ ಆರಂಭಿಸಲಾಗಿತ್ತು. ಆದರೆ, ಕೊರೊನಾ ಹಿನ್ನಲೆ ಮಾರ್ಚ್ ನಲ್ಲಿ ನಾಗರಹೊಳೆ ಸೇರಿದಂತೆ ಎಲ್ಲಾ ಕಡೆ ಸಫಾರಿ ಬಂದ್ ಆಗಿತ್ತು. ಸದ್ಯ ನಾಗರಹೊಳೆಯಲ್ಲಿ ಇಂದಿನಿಂದ ಸಫಾರಿ ಆರಂಭವಾಗಿದೆ.