ಮೈಸೂರು:ಮನೆ ಜಾಗ ಒತ್ತುವರಿ ಸಂಬಂಧ ಮಹಿಳೆಯಿಂದ ಲಂಚ ಪಡೆಯುತ್ತಿದ್ದ ಪಾಲಿಕೆ ವಲಯ ಕಚೇರಿ-7ರ ಕಿರಿಯ ಎಂಜಿನಿಯರ್ ಚಂದ್ರಶೇಖರ್ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದಿದ್ದಾರೆ.
ನಾಚನಹಳ್ಳಿಪಾಳ್ಯ ಗೌರಮ್ಮ ಅವರಿಗೆ ನಾಯ್ಡುನಗರ ಕೆಸರೆ- 2ನೇ ಹಂತದಲ್ಲಿ ಮನೆ ಮಂಜೂರಾಗಿದ್ದು, ಅದನ್ನು ಪುತ್ರಿ ಆಶಾ ಅವರಿಗೆ ದಾನವಾಗಿ ಕೊಟ್ಟಿದ್ದರು. ಆ ಮನೆಯನ್ನು ಕೆಡವಿ ಹೊಸದಾಗಿ ಮನೆ ನಿರ್ಮಾಣ ಮಾಡಿಕೊಂಡಿದ್ದು, ಪಕ್ಕದ ಮನೆಯ ಬಚ್ಚಲು ಮನೆಯಿಂದ ಹೊಗೆ ಬರುವ ವಿಚಾರವಾಗಿ ಆಶಾ ಅವರು ಪಾಲಿಕೆ ವಲಯ-7ರ ಆಯುಕ್ತರಿಗೆ ದೂರು ನೀಡಿದ್ದರು.
ಫೆ.7ರಂದು ಜೆಇ ಚಂದ್ರಶೇಖರ್ ಅವರು ಮನೆ ಬಳಿ ಬಂದು ಪರಿಶೀಲನೆ ನಡೆಸಿ, ಗೌರಮ್ಮ ಅವರಿಗೆ ಹೆಚ್ಚುವರಿ ಜಾಗ ಒತ್ತುವರಿ ಮಾಡಿಕೊಂಡಿದ್ದೀರಿ. 11 ಸಾವಿರ ರೂ. ಲಂಚ ನೀಡಬೇಕು. ಇಲ್ಲದಿದ್ದರೆ ಕಾಂಪೌಂಡ್ ತೆರವುಗೊಳಿಸುವುದಾಗಿ ಸೂಚಿಸಿದ್ದರು. 5 ಸಾವಿರ ರೂ. ಪಡೆದಿದ್ದರು. ಫೆ.9ರಂದು ಭೇಟಿಯಾದಾಗ ಮತ್ತೆ 5 ಸಾವಿರ ರೂ. ನೀಡುವಂತೆ ಒತ್ತಾಯಿಸಿದ್ದಾರೆ.