ಮೈಸೂರು :ಅಕ್ರಮವಾಗಿ ವಾಸವಿದ್ದ ಇಬ್ಬರು ಬಾಂಗ್ಲಾ ಯುವಕರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿರುವ ಘಟನೆ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೈಸೂರು : ಅಕ್ರಮವಾಗಿ ವಾಸವಿದ್ದ ಬಾಂಗ್ಲಾದ ಇಬ್ಬರು ಯುವಕರ ಬಂಧನ.. - Illegal Bangla immigrants arrested
ಇವರ ಬಗ್ಗೆ ಅನುಮಾನ ಬಂದು ಪೊಲೀಸರು ಪರಿಶೀಲನೆ ಮಾಡಿದ್ದರು. ಇವರ ಬಳಿ ಪಾಸ್‌ಪೋರ್ಟ್, ವೀಸಾ ಯಾವುದೂ ದೊರಕಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಪಾಸ್ ಪೋರ್ಟ್ ಕಾಯ್ದೆ 1976 ಹಾಗೂ ಭಾರತೀಯ ವಿದೇಶಿಯರ ಕಾಯ್ದೆ 1946ರ ಅನ್ವಯ ಇಬ್ಬರನ್ನೂ ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ.
![ಮೈಸೂರು : ಅಕ್ರಮವಾಗಿ ವಾಸವಿದ್ದ ಬಾಂಗ್ಲಾದ ಇಬ್ಬರು ಯುವಕರ ಬಂಧನ.. Mysuru: Illegal Bangla immigrants arrested](https://etvbharatimages.akamaized.net/etvbharat/prod-images/768-512-6243661-thumbnail-3x2-sheela.jpg)
ಬಾಂಗ್ಲಾದೇಶದ ಸಾತ್ ಕಿರ ಜಿಲ್ಲೆ ಸಾಮ್ ನಗರದ ಶಿರ್ ಗುಲ್ ಘಾಟ್ ನಿವಾಸಿಗಳಾದ ಮೊಹಮದ್ ಅಬ್ದುಲ್ಲಾ (27) ಮತ್ತು ಮೊಹಮ್ಮದ್ ಹಬೀಬುಲ್ಲಾ (23) ವರಿಇಬ್ಬರೂ ನಂಜನಗೂಡು ತಾಲೂಕಿನ ಇಮ್ಮಾವು ಗ್ರಾಮದಲ್ಲಿ ಕಳೆದ 1 ವರ್ಷದಿಂದಲೂ ವಾಸವಿದ್ದರು. ತಾಂಡವಪುರ ಕೈಗಾರಿಕಾ ಪ್ರದೇಶದಲ್ಲಿರುವ ರಿಷಿ ಫ್ಯಾಬ್ರಿಕ್‌ನಲ್ಲಿ ಉದ್ಯೋಗಿಗಳಾಗಿ ಕೆಲಸ ಮಾಡುತ್ತಿದ್ದರು.
ಇವರ ಬಗ್ಗೆ ಅನುಮಾನ ಬಂದು ಪೊಲೀಸರು ಪರಿಶೀಲನೆ ಮಾಡಿದ್ದರು. ಇವರ ಬಳಿ ಪಾಸ್‌ಪೋರ್ಟ್, ವೀಸಾ ಯಾವುದೂ ದೊರಕಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಪಾಸ್ ಪೋರ್ಟ್ ಕಾಯ್ದೆ 1976 ಹಾಗೂ ಭಾರತೀಯ ವಿದೇಶಿಯರ ಕಾಯ್ದೆ 1946ರ ಅನ್ವಯ ಇಬ್ಬರನ್ನೂ ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ. ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.