ಕರ್ನಾಟಕ

karnataka

ETV Bharat / state

Mysuru Gang Rape: ತಿರುಪೂರದಲ್ಲಿ ಸ್ಥಳ ಮಹಜರು ನಡೆಸಿದ ಪೊಲೀಸರು

ಮೈಸೂರು ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ತಿರುಪೂರಕ್ಕೆ ಕರೆದೊಯ್ದು ಪೊಲೀಸರು ಸ್ಥಳ ಮಹಜರು ನಡೆಸುತ್ತಿದ್ದಾರೆ.

Mysuru Gang Rape
Mysuru Gang Rape

By

Published : Sep 2, 2021, 1:20 PM IST

ಮೈಸೂರು: ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಪೊಲೀಸರು, ಆರೋಪಿಗಳನ್ನು ಕರೆದೊಯ್ದು ಸ್ಥಳ ಮಹಜರು ನಡೆಸುತ್ತಿದ್ದಾರೆ.

ಚಾಮುಂಡಿ ಬೆಟ್ಟದ ಲಲಿತಾದ್ರಿಪುರದ ನಿರ್ಜನ ಪ್ರದೇಶದ ಪರಿಶೀಲನೆ ಬಳಿಕ ಆರೋಪಿಗಳ ಸ್ವಗ್ರಾಮಗಳಿಗೂ ಖಾಕಿಪಡೆ ಲಗ್ಗೆಯಿಟ್ಟಿದೆ. ತಮಿಳುನಾಡಿನ ತಿರುಪೂರಿಗೆ ಆರೋಪಿಗಳನ್ನು ಕರೆದೊಯ್ದಿರುವ ಪೊಲೀಸರು, ಸ್ಥಳ ಮಹಜರು ಮಾಡುತ್ತಿದ್ದಾರೆ.

ಆಗಸ್ಟ್ 24 ರಂದು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಏಳು ಮಂದಿ ಎಸ್ಕೇಪ್ ಆಗಿದ್ದರು. ತಿರುಪೂರಿನಲ್ಲಿ ಐವರನ್ನು ಬಂಧಿಸಿದ ಪೊಲೀಸರು, ಆಗಸ್ಟ್ 30 ರಂದು ಅತ್ಯಾಚಾರವೆಸಗಿದ ಸ್ಥಳಕ್ಕೆ ಆರೋಪಿಗಳನ್ನು ಕರೆದೊಯ್ದು ಸ್ಥಳ ಪಂಚನಾಮೆ ಮಾಡಿದ್ದರು. ಮಾರನೇ ದಿನ ಪೊಲೀಸರು ಮತ್ತೊಬ್ಬ ಆರೋಪಿಯ ಹೆಡೆಮುರಿ ಕಟ್ಟಿದ್ದರು.

ಇದನ್ನೂ ಓದಿ:ಬಾರ್​ನಲ್ಲಿ ಲಾಂಗ್ ಹಿಡಿದು ಪುಂಡಾಟಿಕೆ ಮೆರೆದಿದ್ದ ಇಬ್ಬರು ಅಂದರ್​..!

ಇದೀಗ ಪೊಲೀಸರು, ಈ ಆರು ಜನರನ್ನು ತಮಿಳುನಾಡಿನ ತಿರುಪೂರಿಗೆ ಕರೆದೊಯ್ದು ಸ್ಥಳ ಪರಿಶೀಲಿಸಿ, ಕೆಲ ವಸ್ತುಗಳನ್ನು ಸೀಝ್ ಮಾಡಿದ್ದಾರೆ ಎನ್ನಲಾಗಿದೆ. ಮತ್ತೊಬ್ಬನ ಬಂಧನಕ್ಕಾಗಿ ಖಾಕಿ ತಂಡ ತಿರುಪೂರಿನಲ್ಲಿಯೇ ಮೊಕ್ಕಾಂ ಹೂಡಿದೆ.

ABOUT THE AUTHOR

...view details