ಮೈಸೂರು: ದಸರಾ ಸಮಯದಲ್ಲಿ ಮಾಹಿತಿ ನೀಡುವ ಸಹಾಯವಾಣಿಗೆ ಉಸ್ತುವಾರಿ ಸಚಿವ ವಿ.ಸೋಮಣ್ಣ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚಾಲನೆ ನೀಡಿದರು
ದಸರಾ ಸಹಾಯವಾಣಿಗೆ ಉಸ್ತುವಾರಿ ಸಚಿವರಿಂದ ಚಾಲನೆ - Mysuru Dasra helpline
ನಾಡಹಬ್ಬ ದಸರಾ ಬಗ್ಗೆ ಮಾಹಿತಿ ನೀಡುವ ಸಹಾಯವಾಣಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚಾಲನೆ ನೀಡಿದರು.
ದಸರಾ ಸಹಾಯವಾಣಿಗೆ ಉಸ್ತುವಾರಿ ಸಚಿವರಿಂದ ಚಾಲನೆ
ಬಳಿಕ ಮಾತನಾಡಿ, ಪಾರಂಪರಿಕ ಹಬ್ಬ ದಸರಾಗೆ ಬೇಕಾದ ಎಲ್ಲಾ ಕೆಲಸಗಳು ಭರದಿಂದ ಸಾಗಿದ್ದು, ಅಕ್ಟೋಬರ್ 8ರಂದು ವಿಜಯದಶಮಿ ಅದ್ಧೂರಿಯಾಗಿ ನಡೆಯಲಿದೆ ಎಂದರು.
ದಸರಾ ಉದ್ಘಾಟನೆಗೆ ಕೇವಲ 24 ದಿನ ಬಾಕಿ ಇದ್ದು, ಈ ಹಿನ್ನೆಲೆ ದಸರಾ ಬಗ್ಗೆ ಮಾಹಿತಿ ನೀಡಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಹಾಯವಾಣಿ ಆರಂಭಿಸಲಾಗಿದೆ. ಈ ಸಹಾಯವಾಣಿಯಲ್ಲಿ 150 ಜನ ಯುವಕ ಯುವತಿಯರು ಕೆಲಸ ಮಾಡಲಿದ್ದಾರೆ. ಸಹಾಯವಾಣಿಯ ಉಸ್ತುವಾರಿಯನ್ನು ಸಂಸದ ಪ್ರತಾಪ್ ಸಿಂಹ ನೋಡಿಕೊಳ್ಳಲಿದ್ದಾರೆ.