ಮೈಸೂರು: ದಸರಾ ಆಹಾರ ಮೇಳದಲ್ಲಿ ಬುಡಕಟ್ಟು ಜನಾಂಗದ ಬಂಬೂ ಬಿರಿಯಾನಿ ಜನರ ಗಮನ ಸೆಳೆಯುತ್ತಿದೆ. ಇದು ಆರೋಗ್ಯಕ್ಕೆ ಹೇಗೆ ಉಪಕಾರಿ ಎಂಬ ಬಗ್ಗೆ ಬುಡಕಟ್ಟು ಜನಾಂಗದ ಕೃಷ್ಣಯ್ಯ ಈಟಿವಿ ಭಾರತದೊಂದಿಗೆ ಮಾಹಿತಿ ಹಂಚಿಕೊಂಡರು.
ಆಧುನಿಕ ಯುಗದಲ್ಲಿ ಜನರು ನಮ್ಮ ಪೂರ್ವಜರು ಬಳಸುತ್ತಿದ್ದ ಆಹಾರ ಪದ್ಧತಿಗೆ ಮರಳುತ್ತಿದ್ದಾರೆ. ಇದಕ್ಕೆ ನಿದರ್ಶನ ಮೈಸೂರಿನ ದಸರಾ ಆಹಾರ ಮೇಳ. ನಗರದ ಹಳೆಯ ಜಿಲ್ಲಾಧಿಕಾರಿ ಕಚೇರಿ ಹಿಂಭಾಗದ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಮೈದಾನದ ಮಳಿಗೆಯಲ್ಲಿರುವ ಬುಡಕಟ್ಟು ಆಹಾರ ಬಂಬೂ ಬಿರಿಯಾನಿ ಸವಿಯಲು ನಗರದ ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.
ಬಂಬೂ ಬಿರಿಯಾನಿ ತಯಾರಿಕೆ:ರೆಡಿ ಮಾಡಿಕೊಂಡ ಬಿದಿರಿನ ಬಂಬನ್ನು ಸ್ವಚ್ಛವಾಗಿ ತೊಳೆದಕೊಳ್ಳಬೇಕು. ಅಕ್ಕಿ, ಚಿಕನ್, ಮಾಸಾಲೆ, ಕಾಡು ಅರಿಶಿಣ, ಕಾಡು ಶುಂಠಿ, ಕಾಡು ಕೊತ್ತಂಬರಿ, ಕಾಡು ಕರಿಬೇವಿನಸೊಪ್ಪು ಮಿಶ್ರಣ ಮಾಡಬೇಕು. ನಂತರ ಬಂಬಿಗೆ ತುಂಬಿ, ಮೇಲ್ಭಾಗದಲ್ಲಿ ಮುತ್ತುಗದ ಎಲೆಯಿಂದ ಬಂಬನ್ನು ಮುಚ್ಚಿ, ಮೇಲ್ಭಾಗದಲ್ಲಿ ಬಿರಡೆ ಆಕಾರದಿಂದ ಕ್ಲೋಸ್ ಮಾಡಲಾಗುತ್ತದೆ. ಸೌದೆಗಳಿಂದ ಅರ್ಧ ಗಂಟೆಗಳ ಕಾಲ ಬೆಂಕಿಯಲ್ಲಿ ಸುಟ್ಟು, ಹೊರತೆಗೆದಾಗ ಹತ್ತು ನಿಮಿಷಗಳ ಕಾಲ ಬಂಬಿನಲ್ಲಿ ರೆಡಿಯಾದ ಬಿರಿಯಾನಿಯನ್ನು ತಣ್ಣಗಾಗಲು ಬಿಡಬೇಕು. ಬಳಿಕ ಜನರಿಗೆ ನೀಡುತ್ತೇವೆ ಎಂದು ಕೃಷ್ಣಯ್ಯ ವಿವರಿಸಿದರು.