ಮೈಸೂರು: ಜಿಲ್ಲೆಯಲ್ಲಿ ಇಂದು ಗರ್ಭಿಣಿ ಹಾಗೂ ಆಕೆಯ ತಾಯಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಮೂಲಕ ಒಟ್ಟು ಸೋಂಕಿತರ 98 ಆಗಿದೆ.
ಕೊರೊನಾ ಮುಕ್ತವಾಗಿದ್ದ ಮೈಸೂರಿನಲ್ಲಿ ಇಂದು ಗರ್ಭಿಣಿ ಸೇರಿ ಇಬ್ಬರಿಗೆ ಸೋಂಕು - ಮೈಸೂರು ಕೊವಿಡ್ ಅಪ್ಡೇಟ್
ಮೈಸೂರಿನಲ್ಲಿ ಇಂದು ಮಹಾರಾಷ್ಟ್ರದಿಂದ ಹಿಂದಿರುಗಿದ ಗರ್ಭಿಣಿ ಹಾಗೂ ಆಕೆಯ ತಾಯಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 6ಕ್ಕೇರಿದೆ. ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 98 ಪ್ರಕರಣಗಳು ಪತ್ತೆಯಾಗಿವೆ.
![ಕೊರೊನಾ ಮುಕ್ತವಾಗಿದ್ದ ಮೈಸೂರಿನಲ್ಲಿ ಇಂದು ಗರ್ಭಿಣಿ ಸೇರಿ ಇಬ್ಬರಿಗೆ ಸೋಂಕು Mysuru Covid Update](https://etvbharatimages.akamaized.net/etvbharat/prod-images/768-512-7463223-1053-7463223-1591191941412.jpg)
ಮೈಸೂರು ಕೊವಿಡ್ ಅಪ್ಡೇಟ್
ಮುಂಬೈನಿಂದ ವಿಮಾನದಲ್ಲಿ ಬೆಂಗಳೂರು ಮಾರ್ಗವಾಗಿ ಆಗಮಿಸಿದ್ದ ರಾಮಕೃಷ್ಣ ನಗರದ ನಿವಾಸಿಗಳಾದ 27 ವರ್ಷದ ಗರ್ಭಿಣಿ ಹಾಗೂ ಆಕೆಯ 50 ವರ್ಷದ ತಾಯಿಗೆ ಸೋಂಕು ದೃಢಪಟ್ಟಿದೆ. ಇಬ್ಬರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಂಕಿತ ಮಹಿಳೆಯರ ನಿವಾಸದ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಆಗಿ ಗುರುತಿಸಿ ತೀವ್ರ ನಿಗಾವಹಿಸಲಾಗಿದೆ.
ಜಿಲ್ಲೆಯ ಒಟ್ಟು ಪ್ರಕರಣಗಳ ಪೈಕಿ 92 ಜನ ಈಗಾಗಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಐದು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.