ಕರ್ನಾಟಕ

karnataka

ETV Bharat / state

ಆಕರ್ಷಕ ದೀಪಾಲಂಕಾರದಿಂದ ಮೈಸೂರು ನಗರ ಝಗಮಗ-ವಿಡಿಯೋ - Mysuru City shining With Colorful Lights

ದಸರಾ ಪ್ರಯುಕ್ತ ಮೈಸೂರು ನಗರದಾದ್ಯಂತ 135 ಕಿ.ಮೀ ವ್ಯಾಪ್ತಿಯಲ್ಲಿ ವಿದ್ಯುತ್​ ದೀಪಾಲಂಕಾರ ಮಾಡಲಾಗಿದೆ.

Etmysuru-city-shining-with-colorful-lights-for-dussehrav Bharat
ಮೈಸೂರು ದಸರಾ: ದೀಪಾಲಂಕಾರದಿಂದ ಝಗಮಗಿಸುತ್ತಿರುವ ಸಾಂಸ್ಕೃತಿಕ ನಗರಿ

By ETV Bharat Karnataka Team

Published : Oct 20, 2023, 6:07 PM IST

ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ಸಾಂಸ್ಕೃತಿಕ ನಗರಿ

ಮೈಸೂರು: ನಾಡಹಬ್ಬ ದಸರಾ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿಯ ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಆಕರ್ಷಕ ವಿದ್ಯುತ್​ ದೀಪಾಲಂಕಾರ ಮಾಡಲಾಗಿದೆ. ವಿಶ್ವವಿಖ್ಯಾತ ಅಂಬವಿಲಾಸ ಅರಮನೆ ದೀಪಾಲಂಕಾರದಿಂದ ಝಗಮಗಿಸುತ್ತಿದ್ದು, ಅರಮನೆ ಸೌಂದರ್ಯ ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದು ಬರುತ್ತಿದೆ. ಈ ಬಾರಿ ಸಾಂಪ್ರದಾಯಿಕ ದಸರಾ ವೈಭವವನ್ನು ಹೆಚ್ಚಿಸಲು ನಗರದ 135 ಕಿ.ಮೀ ವ್ಯಾಪ್ತಿಗೂ ಹೆಚ್ಚು ವಿಸ್ತೀರ್ಣದಲ್ಲಿ ವಿದ್ಯುತ್​ ದೀಪಾಲಂಕಾರ ಮಾಡಲಾಗಿದೆ. ಈ ದೀಪಾಲಂಕಾರ ಅ.15 ರಿಂದ ಅ.24ರ ವರೆಗೆ10 ದಿನಗಳ ಕಾಲ ಇರಲಿದ್ದು, 6 ಕೋಟಿ ರೂ.ಗೂ ಹೆಚ್ಚು ಹಣ ವ್ಯಯಿಸಲಾಗಿದೆ.

ನಗರದ ಪ್ರಮುಖ ವೃತ್ತಗಳು, ಪಾರಂಪರಿಕ ಕಟ್ಟಡಗಳು, ರಸ್ತೆಗಳು ಸೇರಿದಂತೆ ಐತಿಹಾಸಿಕ ಸ್ಥಳಗಳಲ್ಲಿ ದಸರಾ ದೀಪಾಲಂಕಾರ ಮಾಡಲಾಗಿದೆ. 30ಕ್ಕೂ ಹೆಚ್ಚು ಮಹನೀಯರ ಆಕೃತಿಗಳನ್ನು ನಗರದ ದೊಡ್ಡಕೆರೆ ಮೈದಾನ, ಚಾಮರಾಜ ವೃತ್ತ, ಜಯಚಾಮರಾಜೇಂದ್ರ ವೃತ್ತ, ಕೆ.ಆರ್.ವೃತ್ತ, ರೈಲ್ವೆ ನಿಲ್ದಾಣದ ಸಮೀಪದ ವೃತ್ತ, ರಾಮಸ್ವಾಮಿ ವೃತ್ತ, ಎಲ್ಐಸಿ ವೃತ್ತ, ಸರ್ಕಾರಿ ಪಾರಂಪರಿಕ ಕಟ್ಟಡಗಳು ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ವಿದ್ಯುತ್​ ದೀಪಗಳಿಂದ ನಿರ್ಮಿಸಲಾಗಿದೆ.

ಇದರ ಜತೆಗೆ ಅರಮನೆ ಸುತ್ತಮುತ್ತಲಿನ ರಸ್ತೆಗಳು, ಜೆಎಲ್​ಬಿ ರಸ್ತೆ, ಸೈಯಾಜಿ ರಾವ್ ರಸ್ತೆ, ದೇವರಾಜ್ ಅರಸು ರಸ್ತೆ, ಇರ್ವಿನ್ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಿಗೆ ದೀಪಾಲಂಕಾರ ಮಾಡಲಾಗಿದ್ದು, ಇದನ್ನು ವೀಕ್ಷಿಸಲು ಜನರು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ.

ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಅರಮನೆ: ವಿಶ್ವ ಪ್ರಸಿದ್ಧ ಅಂಬವಿಲಾಸ ಅರಮನೆಯ ಶಾಶ್ವತ ದೀಪಾಲಂಕಾರದ ಮುಂದೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡಲು ಪ್ರವಾಸಿಗರು ದೊಡ್ಡ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ದೀಪಾಲಂಕಾರದಿಂದ ಮಿಂಚುತ್ತಿರುವ ಅರಮನೆಯ ಮುಂಭಾಗ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂತಸ ಪಡುತ್ತಿದ್ದಾರೆ.

ಇದನ್ನೂ ಓದಿ:ಅಧಿದೇವತೆ ಚಾಮುಂಡೇಶ್ವರಿಗೆ ಮಹಾಮಂಗಳಾರತಿ ವೇಳೆ ಗನ್ ಸೆಲ್ಯೂಟ್- ವಿಡಿಯೋ ನೋಡಿ

ಸರಸ್ವತಿ ಪೂಜೆ ನೆರವೇರಿಸಿದ ಯದುವೀರ್‌:ಶರನ್ನವರಾತ್ರಿಯ 6ನೇ ದಿನವಾದ ಇಂದು ಮೈಸೂರು ಅರಮನೆಯಲ್ಲಿ ವಿದ್ಯಾದೇವತೆ ಸರಸ್ವತಿಗೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬೆಳಿಗ್ಗೆ 10.5 ರಿಂದ 10.25 ರ ಶುಭ ಲಗ್ನದಲ್ಲಿ ಪೂಜೆ ನೆರವೇರಿಸಿದರು. ಅರಮನೆಯ ರಾಜಪುರೋಹಿತರ ಸಮ್ಮುಖದಲ್ಲಿ ಸರಸ್ವತಿ ವಿಗ್ರಹವಿಟ್ಟು ಪುರಾತನ ಕಾಲದ ವೀಣೆ, ಧಾರ್ಮಿಕ ಗ್ರಂಥಗಳಿಗೆ ಪೂಜೆ ನೆರವೇರಿಸಲಾಯಿತು.

ಪುರೋಹಿತರು ವೇದಘೋಷಗಳ ಮಾಡಿದರು. ತಂದೆಯ ಪಕ್ಕದಲ್ಲಿ ಮಗ ಆದ್ಯವೀರ್ ನರಸಿಂಹರಾಜ ಒಡೆಯರ್ ಭಾಗವಹಿಸಿದ್ದರು. ನಾಳೆ ಶನಿವಾರ (ಅ.21) ಕಾಳರಾತ್ರಿ ಪೂಜೆ, ಅ.22ರಂದು ಭಾನುವಾರ ದುರ್ಗಾಷ್ಠಮಿ ಪೂಜೆ, ಸೋಮವಾರ ಅ.23ರಂದು ಸಾಂಪ್ರದಾಯಿಕ ಆಯುಧ ಪೂಜೆ ಹಾಗೂ ಅ.24ರ ಮಂಗಳವಾರ ವಿಜಯ ದಶಮಿ ಪೂಜೆ ನೆರವೇರಲಿದೆ. ಈ ಮೂಲಕ ಅರಮನೆಯ ಶರನ್ನವರಾತ್ರಿಯ ಸಾಂಪ್ರದಾಯಿಕ ಪೂಜೆಗಳು ಸಂಪನ್ನಗೊಳ್ಳಲಿವೆ.

ABOUT THE AUTHOR

...view details