ಮೈಸೂರು: ಮಳೆಗಾಲದಲ್ಲಿ ನಗರದ ಪ್ರದೇಶದಲ್ಲಿ ಉಂಟಾಗುವ ಸಮಸ್ಯೆಗಳನ್ನು ಎದುರಿಸಲು ಪಾಲಿಕೆ ವಿಶೇಷ ತಂಡ ಹಾಗೂ ಕಂಟ್ರೋಲ್ ರೂಮ್‌ಗಳನ್ನು ತೆರೆದಿದೆ.
ಮಳೆಗಾಲದ ಅನಾಹುತಗಳನ್ನು ಎದುರಿಸಲು ಮೈಸೂರು ಪಾಲಿಕೆ ವಿಶೇಷ ತಂಡ ರಚನೆ - ಮಳೆಗಾಲದ ಅನಾಹುತಗಳನ್ನು ಎದುರಿಸಲು ಮೈಸೂರು ಪಾಲಿಕೆ ಸರ್ವಸಮ್ಮತ್ತ
ನಗರದ ಜೊತೆಗೆ ಹಲವು ಬಡಾವಣೆಗಳು, ತಗ್ಗು ಪ್ರದೇಶಗಳಲ್ಲಿ ಯಾವುದೇ ಅನುಮತಿ ಪಡೆಯದೆ ನಿರ್ಮಾಣವಾಗುತ್ತಿವೆ. ಇತಂಹ ಬಡಾವಣೆಗಳಲ್ಲಿ ಮಳೆಗಾಲದಲ್ಲಿ ನೀರು ನುಗ್ಗಿ ಜನರು ಸಂಕಷ್ಟಕ್ಕೆ ಸಿಲುಕುತ್ತಾರೆ. ಈ ರೀತಿ ಸಂಕಷ್ಟದಲ್ಲಿ ಸಿಲುಕಿರುವ ಜನರಿಗೆ ಪಾಲಿಕೆ ಒಂದು ವಿಶೇಷ ತಂಡ ರಚನೆ ಮಾಡಿದೆ..
ಸ್ವಚ್ಛ ನಗರಿ ಮೈಸೂರು ವೇಗವಾಗಿ ಬೆಳೆಯುತ್ತಿದೆ. ಈ ನಗರದ ಜೊತೆಗೆ ಹಲವು ಬಡಾವಣೆಗಳು, ತಗ್ಗು ಪ್ರದೇಶಗಳಲ್ಲಿ ಯಾವುದೇ ಅನುಮತಿ ಪಡೆಯದೆ ನಿರ್ಮಾಣವಾಗುತ್ತಿವೆ. ಇಂತಹ ಬಡಾವಣೆಗಳಲ್ಲಿ ಮಳೆಗಾಲದಲ್ಲಿ ನೀರು ನುಗ್ಗಿ ಜನರು ಸಂಕಷ್ಟಕ್ಕೆ ಸಿಲುಕುತ್ತಾರೆ. ಈ ಸಂದರ್ಭದಲ್ಲಿ ಪಾಲಿಕೆ ಈ ರೀತಿಯ ಸಂಕಷ್ಟದಲ್ಲಿ ಸಿಲುಕಿರುವ ಜನರಿಗೆ ಒಂದು ವಿಶೇಷ ತಂಡ ರಚನೆ ಮಾಡಿದ್ದು, ಜೊತೆಗೆ ಪಾಲಿಕೆಯಲ್ಲಿ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸುವ ಕಂಟ್ರೋಲ್ ರೂಮ್ ಸಹ ವ್ಯವಸ್ಥೆ ಮಾಡಿದೆ.
ಇದಲ್ಲದೆ ವಿದ್ಯುತ್ ಪ್ರಸರಣ ನಿಗಮ ನಗರಾಭಿವೃದ್ಧಿ ಪ್ರಾಧಿಕಾರದ ಜೊತೆ ಜಂಟಿಯಾಗಿ ಮಳೆಗಾಲದ ಅನಾಹುತವನ್ನು ಎದುರಿಸಲು ಮತ್ತೊಂದು ತಂಡ ಸಹ ರಚನೆ ಮಾಡಲಾಗಿದೆ. ಇಷ್ಟಿದ್ರೂ,ಇದೊಂದು ಪ್ಲಾನ್ ಸಿಟಿಆಗಿರೋದ್ರಿಂದಮಳೆಗಾಲದಲ್ಲಿ ಅಷ್ಟೊಂದು ಸಮಸ್ಯೆಗಳು ಕಂಡು ಬರುವುದಿಲ್ಲ ಎಂದು ನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ ವಿವರಿಸಿದ್ದಾರೆ.