ಮೈಸೂರು: ಕಳೆದ 2022-23ನೇ ಆರ್ಥಿಕ ವರ್ಷದಲ್ಲಿ ಮೈಸೂರು ಮಹಾನಗರ ಪಾಲಿಕೆ 310 ಕೋಟಿಗೂ ಹೆಚ್ಚು ತೆರಿಗೆ ಸಂಗ್ರಹ ಮಾಡುವ ಮೂಲಕ ದಾಖಲೆ ನಿರ್ಮಿಸಿದೆ. ಆ ಮೂಲಕ ತಾನು ನಿರ್ವಹಣೆ ಮಾಡುವ ಬಾಬ್ತುಗಳಿಗೆ, ಆರ್ಥಿಕ ಶಕ್ತಿಯನ್ನು ಕ್ರೂಢೀಕರಿಸಿ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದ ಅನುದಾನವನ್ನು ಅವಲಂಬಿಸದೇ ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸುವ ಮಹತ್ವದ ಹೆಜ್ಜೆ ಇಟ್ಟಿದೆ.
ಯಾವ ಯಾವ ಬಾಬ್ತುಗಳಿಂದ ತೆರಿಗೆ ಸಂಗ್ರಹ?:ಪಾಲಿಕೆಯಿಂದ ಸಾಮಾನ್ಯವಾಗಿ ಎಲ್ಲಾ ಕಡೆ ಸೋರಿಕೆ, ಅನಗತ್ಯ ವೆಚ್ಚ, ಸರಿಯಾದ ನಿರ್ವಹಣೆ ಆಗುತ್ತಿಲ್ಲ ಎಂಬ ಮಾತನ್ನು ಕೇಳುತ್ತಿರುತ್ತೇವೆ. ಇದಕ್ಕೆ ತದ್ವಿರುದ್ಧ ಎಂಬಂತೆ ಮೈಸೂರಿನ ಮಹಾನಗರ ಪಾಲಿಕೆ, ಸ್ವಚ್ಛತೆಯಲ್ಲಿ ದೇಶದಲ್ಲೇ ಹೆಸರು ಮಾಡಿರುವ ಪಾಲಿಕೆ. ಈಗ ತೆರಿಗೆ ಸಂಗ್ರಹದಲ್ಲೂ ಸಾಧನೆ ಮಾಡಿದೆ. ಕಳೆದ ಆರ್ಥಿಕ ವರ್ಷವಾದ 2022-23ನೇ ವರ್ಷದಲ್ಲಿ 310.49 ಕೋಟಿ ರೂ.ಗಳನ್ನು ವಿವಿಧ ಮೂಲಗಳಿಂದ ತೆರಿಗೆ ಸಂಗ್ರಹ ಮಾಡಿದೆ. ಅದರಲ್ಲಿ 16,900 ಲಕ್ಷ ಆಸ್ತಿ ತೆರಿಗೆ, 9,310 ಲಕ್ಷ ರೂ. ನೀರಿನ ಶುಲ್ಕ, 1440 ಲಕ್ಷ ರೂ. ಅನುಮೋದನ ಶುಲ್ಕ, 668 ಲಕ್ಷ ರೂ. ಟ್ರೇಡ್ ಲೈಸೆನ್ಸ್ ಫೀಸ್, 368 ಲಕ್ಷ ರೂ. ವಾಣಿಜ್ಯ ಮಳಿಗೆಗಳ ಬಾಡಿಗೆ, 64 ಲಕ್ಷ ರೂ. ಜಾಹೀರಾತು ಶುಲ್ಕ ಹಾಗೂ 2313 ಲಕ್ಷ ರೂ. ವಿವಿಧ ಬಾಬ್ತುಗಳಿಂದ ತೆರಿಗೆ ಸಂಗ್ರಹ ಮಾಡಿ ಪಾಲಿಕೆಯ ಇತಿಹಾಸದಲ್ಲೇ ದಾಖಲೆ ಬರೆದಿದೆ.
ಇದನ್ನೂ ಓದಿ:ಬಿಬಿಎಂಪಿ 8 ವಲಯಗಳ ವ್ಯಾಪ್ತಿಯಲ್ಲಿ 1,471 ಕೋಟಿ ರೂಪಾಯಿ ಆಸ್ತಿ ತೆರಿಗೆ ಸಂಗ್ರಹ ಬಾಕಿ