ಕರ್ನಾಟಕ

karnataka

ETV Bharat / state

ಬಹಿರ್ದೆಸೆಗೆ ತೆರಳಿದ್ದ ಮಹಿಳೆ ನಿಗೂಢ ಸಾವು: ಸಾಮೂಹಿಕ ಅತ್ಯಾಚಾರದ ಬೆನ್ನಲ್ಲೆ ಮತ್ತೊಂದು ದುರ್ಘಟನೆಗೆ ಸಾಕ್ಷಿಯಾದ ಮೈಸೂರು - woman death in Mysore

ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ಬೆನ್ನಿಗೇ ಮೈಸೂರು ಜಿಲ್ಲೆಯಲ್ಲಿ ಮತ್ತೊಂದು ದುರ್ಘಟನೆ ನಡೆದಿದೆ. ಮಹಿಳೆಯೊಬ್ಬಳ ನಿಗೂಢ ಸಾವು ಮತ್ತೊಂದು ಅತ್ಯಾಚಾರ ನಡೆದಿದೆಯಾ ಎಂಬ ಅನುಮಾನಕ್ಕೆ ದಾರಿ ಮಾಡಿಕೊಡುತ್ತಿದೆ.

ಶವ
ಶವ

By

Published : Aug 27, 2021, 10:46 PM IST

Updated : Aug 27, 2021, 11:55 PM IST

ಮೈಸೂರು: ಬಹಿರ್ದೆಸೆಗೆ ತೆರಳಿದ್ದ ಮಹಿಳೆಯೊಬ್ಬಳು ನಿಗೂಢವಾಗಿ ಮೃತಪಟ್ಟಿವುದು ತಡವಾಗಿ ಬೆಳಕಿಗೆ ಬಂದಿದೆ. ಘಟನೆಯಿಂದ ಸಾರ್ವಜನಿಕರಲ್ಲಿ ಮೈಸೂರು ಜಿಲ್ಲೆಯಲ್ಲಿ ಮತ್ತೊಂದು ಅತ್ಯಾಚಾರ ನಡೆಯಿತಾ? ಎಂಬ ಅನುಮಾನ ಮೂಡಿದೆ.

ತಿ. ನರಸೀಪುರ ತಾಲೂಕಿನ ಮೂಗೂರಿನ 36 ವರ್ಷದ ಮಹಿಳೆ ಮೃತಪಟ್ಟವಳು ಎಂದು ತಿಳಿದು ಬಂದಿದೆ. ಮಹಿಳೆ ಮನೆಯಿಂದ ಹೊಸಳ್ಳಿ ಮೋಳೆಯ ಕಾಲುವೆ ಬಳಿ ಬುಧವಾರ ಸಂಜೆ ಬಹಿರ್ದೆಸೆಗೆ ಹೋಗಿದ್ದರು. ಆದರೆ, ಗುರುವಾರ ಆಕೆ ಶವವಾಗಿ ಪತ್ತೆಯಾಗಿದ್ದಾಳೆ. ಕಾಲುವೆಯೊಂದರಲ್ಲಿ ಅನುಮಾನಾಸ್ಪದವಾಗಿ ಚೀಲದಲ್ಲಿ ಶವವೊಂದು ಕಂಡು ಬಂದಿದ್ದು, ಅದನ್ನು ತೆರೆದು ನೋಡಿದಾಗ ಅದರಲ್ಲಿ ಭಾಗ್ಯಲಕ್ಷ್ಮಿ ಶವ ಪತ್ತೆಯಾಗಿದೆ. ತಾಯಿಯ ಸಾವಿನಿಂದ ಮಕ್ಕಳು ದಿಗ್ಭ್ರಾಂತರಾಗಿದ್ದಾರೆ.

ಮೃತರ ಕತ್ತಿನ ಮೇಲೆ ಆಯುಧದಿಂದ ಹಲ್ಲೆ ಮಾಡಿರುವ ಗುರುತಿರುವುದಾಗಿ ಸ್ಥಳೀಯರು ಹೇಳಿದ್ದು, ದುಷ್ಕರ್ಮಿಗಳು ಆಕೆಯ ಕತ್ತು ಕೊಯ್ದು ಶವವನ್ನು ಚೀಲಕ್ಕೆ ತುಂಬಿ ಕಾಲುವೆಗೆ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಅಲ್ಲದೇ ಆಕೆಯನ್ನು ಯಾರೋ ಅತ್ಯಾಚಾರ ಮಾಡಿ ಕೊಲೆಗೈದಿರುವ ಬಗ್ಗೆಯೂ ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Gangrape ಪ್ರಕರಣಕ್ಕೆ ಸಂಬಂಧಿಸಿದಂತೆ ತಾಂತ್ರಿಕ, ವೈಜ್ಞಾನಿಕ ಸಾಕ್ಷ್ಯಗಳು ಸಾಕಷ್ಟಿವೆ: ಡಿಜಿಪಿ ಪ್ರವೀಣ್ ಸೂದ್

ಸುದ್ದಿ ತಿಳಿದು ಸ್ಥಳಕ್ಕೆ ಬಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಪರಿಶೀಲನೆ ನಡೆಸಿದರು. ಈ ಬಗ್ಗೆ ತಿ.ನರಸೀಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

Last Updated : Aug 27, 2021, 11:55 PM IST

ABOUT THE AUTHOR

...view details