ಮೈಸೂರು:ಜಿಲ್ಲಾ ಪಂಚಾಯತ್ ಸಿಇಒ ಪ್ರಶಾಂತ್ ಕುಮಾರ್ ಮಿಶ್ರ ಕಿರುಕುಳದಿಂದ ಟಿಎಚ್ಒ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಕೂಡಲೇ ಸಿಇಒ ಅವರನ್ನು ಅಮಾನತು ಮಾಡಬೇಕೆಂದು ಕರ್ನಾಟಕ ವೈದ್ಯಕೀಯ ಪರಿಷತ್ ಸದಸ್ಯ ಡಾ.ರವೀಂದ್ರ ಆಗ್ರಹಿಸಿದ್ದಾರೆ.
ಮೈಸೂರು ಜಿ.ಪಂ. ಸಿಇಒ ಅಮಾನತು ಮಾಡಿ: ಕರ್ನಾಟಕ ವೈದ್ಯಕೀಯ ಪರಿಷತ್ ಸದಸ್ಯ ಡಾ.ರವೀಂದ್ರ ಆಗ್ರಹ - ಕರ್ನಾಟಕ ವೈದ್ಯಕೀಯ ಪರಿಷತ್ ಸದಸ್ಯ ಡಾ.ರವೀಂದ್ರ
ನಂಜನಗೂಡಿನ ಪ್ರಭಾರಿ ತಾಲೂಕು ವೈದ್ಯಾಧಿಕಾರಿ ನಾಗೇಂದ್ರ ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ಸಿಇಒ ಪ್ರಶಾಂತ್ ಕುಮಾರ್ ಮಿಶ್ರ ಕಿರುಕುಳ ಕಾರಣ. ಹೀಗಾಗಿ ಸಿಇಒ ಪ್ರಶಾಂತ್ ಕುಮಾರ್ ಅಮಾನತು ಮಾಡಬೇಕೆಂಬ ಆಗ್ರಹ ವ್ಯಕ್ತವಾಗಿದೆ.
ನಿನ್ನೆ ನಂಜನಗೂಡಿನ ಪ್ರಭಾರಿ ತಾಲೂಕು ವೈದ್ಯಾಧಿಕಾರಿ ನಾಗೇಂದ್ರ ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ಸಿಇಒ ಪ್ರಶಾಂತ್ ಕುಮಾರ್ ಮಿಶ್ರ ಕಿರುಕುಳ ಕಾರಣ. ಕಳೆದ 6 ತಿಂಗಳಿನಿಂದಲೂ ನಾಗೇಂದ್ರ ಮನೆಗೆ ಹೋಗದೆ ದಿನದ 24 ಗಂಟೆ ಕೆಲಸ ಮಾಡಿ, ಕುಟುಂಬದವರಿಗೆ ಕೊರೊನಾ ಬರುತ್ತದೆ ಎಂಬ ಹೆದರಿಕೆಯಿಂದ ಬೇರೆ ಮನೆ ಮಾಡಿಕೊಂಡು ನಿಯತ್ತಾಗಿ ಕೆಲಸ ಮಾಡುತ್ತಿದ್ದರು ಎಂದು ಡಾ.ರವೀಂದ್ರ ಹೇಳಿದರು.
ಜುಬಿಲಂಟ್ ಕೇಸ್ ಸಮರ್ಪಕವಾಗಿ ನಿಯಂತ್ರಿಸಿ ಶೂನ್ಯಕ್ಕಿಳಿಸಿದ ನಾಗೇಂದ್ರನಿಗೆ ಟಾರ್ಗೆಟ್ ಮುಟ್ಟಲಿಲ್ಲ ಎಂದು ಜೈಲಿಗೆ ಹಾಕುತ್ತೀನಿ ಎಂದು ಪ್ರಶಾಂತ್ ಹೆದರಿಸಿದ್ದರು. ಹೀಗಾಗಿ ಸೂಕ್ಷ್ಮ ಮನುಷ್ಯ ನಾಗೇಂದ್ರ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೂಡಲೇ ಮೈಸೂರು ಜಿಲ್ಲಾ ಪಂಚಾಯತಿ ಸಿಇಒ ಪ್ರಶಾಂತ್ ಕುಮಾರ್ ಮಿಶ್ರ ಅವರನ್ನು ಅಮಾನತು ಮಾಡಬೇಕು, ಇಲ್ಲ ಎಂದರೆ ಮೈಸೂರು ಮತ್ತು ಚಾಮರಾಜನಗರದ ವೈದ್ಯರು ಕೆಲಸ ಮಾಡುವುದಿಲ್ಲ ಎಂದು ಡಾ.ರವೀಂದ್ರ ಆಗ್ರಹಿಸಿದ್ದಾರೆ.