ಕರ್ನಾಟಕ

karnataka

ETV Bharat / state

ಅಕ್ರಮ‌ ಸಂಬಂಧ ಆರೋಪ: ಪತಿಯಿಂದ ಪತ್ನಿಯ ಕೊಲೆ!

ಮಹಿಳೆಯೋರ್ವಳನ್ನು ಸ್ವತಃ ಪತಿಯೇ ಕೊಲೆ ಮಾಡಿರುವ ಘಟನೆ ಜಯನಗರದಲ್ಲಿ‌ ನಡೆದಿದೆ.

Mysore
ಪತಿಯಿಂದ ಪತ್ನಿ ಕೊಲೆ

By

Published : May 5, 2021, 1:36 PM IST

ಮೈಸೂರು:ಅಕ್ರಮ ಸಂಬಂಧ ಆರೋಪ ಹಿನ್ನೆಲೆ ಮಹಿಳೆಯೋರ್ವಳನ್ನು ಸ್ವತಃ ಪತಿಯೇ ಕೊಲೆ ಮಾಡಿರುವ ಘಟನೆ ಜಯನಗರದಲ್ಲಿ‌ ನಡೆದಿದೆ.

ನಳಿನಿ (32) ಕೊಲೆಯಾದ ಮಹಿಳೆ. ಇಬ್ಬರು ಮಕ್ಕಳ ತಾಯಿಯಾಗಿರುವ ನಳಿನಿಗೆ ಪರ ಪುರುಷನ ಜೊತೆ ಅಕ್ರಮ ಸಂಬಂಧ ಆರೋಪ‌ ವಿಚಾರದಲ್ಲಿ ದಂಪತಿ ನಡುವೆ ಹಲವು ಬಾರಿ ಗಲಾಟೆ ಆಗಿತ್ತು. ಇದೇ ಕಾರಣಕ್ಕೆ ಪತ್ನಿಯನ್ನ ಮಚ್ಚಿನಿಂದ ಕೊಚ್ಚಿ ಕೊಂದಿದ್ದಾನೆ ಎನ್ನಲಾಗ್ತಿದೆ.

ಈ ಸಂಬಂಧ ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತಿ ರಾಜೇಶ್(40)ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. .

ABOUT THE AUTHOR

...view details