ಮೈಸೂರು: ಮೈಸೂರು ವಿಶ್ವವಿದ್ಯಾಲಯ ಅಂದ್ರೆ ಶಿಕ್ಷಣಕ್ಕೆ ಹೊಸ ಮೆರಗು ತಂದುಕೊಡುವ ವಿ.ವಿ. ಈ ಕಾರಣಕ್ಕೆ ಎಲ್ಲೆಲ್ಲಿಂದಲೋ ವಿದ್ಯಾರ್ಥಿಗಳು ಇಲ್ಲಿಗೆ ಓದಲು ಸಾಕಷ್ಟು ಹಣ ಖರ್ಚು ಮಾಡಿಕೊಂಡು ಬರುತ್ತಾರೆ. ಆದರೆ ಇಲ್ಲಿನ ಮೂಲಸೌಕರ್ಯದ ಕೊರತೆಯಿಂದ ಅವರ ವಿದ್ಯಾರ್ಥಿ ಜೀವನದ ಭವಿಷ್ಯ ಕರಾಳವಾಗಿದೆ ಎಂಬ ಆರೋಪಗಳಿವೆ. ವಿದ್ಯಾರ್ಥಿನಿಲಯಗಳು ಈಗಲೋ ಆಗಲೋ ಬೀಳುವಂತಿವೆ. ಇಲ್ಲಿ ಕೊರತೆಗಳ ಆಗರ ಎದ್ದು ಕಾಣುತ್ತಿದ್ದು, ಮಹಿಳಾ ವಿದ್ಯಾರ್ಥಿನಿಲಯದ ವಿದ್ಯಾರ್ಥಿನಿಯರು ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ಮಳೆ ಬಂದರೆ ವಿದ್ಯಾರ್ಥಿನಿಯರ ಗೋಳು ಕೇಳುವವರಿಲ್ಲ. ಮಳೆ ನೀರಿನ ನಡುವೆ ವಿದ್ಯಾರ್ಥಿನಿಯರು ನರಕಯಾತನೆ ಅನುಭವಿಸುತ್ತಿದ್ದಾರೆ. ಹಳೆಯ ಕಟ್ಟಡದ ಛಾವಣಿಯಿಂದ ಮಳೆ ನೀರು ನಿರಂತರವಾಗಿ ಜಿನುಗುತ್ತದೆ. ಪರಿಣಾಮ ಅಲ್ಲೇ ನರಕಯಾತನೆ ಅನುಭವಿಸಿಕೊಂಡು ದಿನ ದೂಡುತ್ತಿದ್ದಾರೆ.