ಮೈಸೂರು :ಎಲ್ಎಲ್ಬಿ ಮುಗಿಸಿದ ಪ್ರಥಮ ತೃತೀಯ ಲಿಂಗಿ ಎಂಬ ಖ್ಯಾತಿಗೆ ಜಿಲ್ಲೆಯ ತೃತೀಯ ಲಿಂಗಿಯೊಬ್ಬರು ಪಾತ್ರರಾಗಿದ್ದಾರೆ.
ಮೈಸೂರಿನ ಜಯನಗರದ ನಿವಾಸಿ ಸಿ. ಶಶಿ ಎಂಬುವರು ಎಲ್ಎಲ್ಬಿ ಮುಗಿಸಿ ಲಾಯರ್ ಆದ ರಾಜ್ಯದ ಮೊದಲ ತೃತೀಯ ಲಿಂಗಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಲಾಯರ್ ಆದ ಮೈಸೂರಿನ ತೃತೀಯ ಲಿಂಗಿ ಇವರು ನಗರದ ವಿದ್ಯಾವರ್ಧಕ ಕಾಲೇಜಿನಲ್ಲಿ 3 ವರ್ಷದ ಎಲ್ಎಲ್ಬಿ ಕೋರ್ಸ್ ಮುಗಿಸಿದ್ದಾರೆ. ಈ ಕೋರ್ಸ್ ಮುಗಿಸಲು ಸಹಾಯ ಮಾಡಿದ ಎಲ್ಲಾ ಉಪನ್ಯಾಸಕರಿಗೂ ಅಭಿನಂದನೆ ಸಲ್ಲಿಸಿದ್ದಾರೆ.
10ನೇ ತರಗತಿ ಓದುವಾಗ ದೇಹದಲ್ಲಿ ಆದ ಬದಲಾವಣೆಯಿಂದ ತೃತೀಯ ಲಿಂಗಿಯಾಗಿದ್ರು. ಆ ನಂತರ ಅವರು ತುಂಬಾ ನೋವು, ಅವಮಾನ, ನಿಂದನೆ, ಕಿರುಕುಳಗಳನ್ನು ಅನುಭವಿಸಿದ್ದಾರೆ.
ಓದಿ:ಎಸ್ ಎಲ್ ಭೈರಪ್ಪನವರ 'ಪರ್ವ' ರಂಗ ಪ್ರದರ್ಶನಕ್ಕೆ ₹50 ಲಕ್ಷ ಅನುದಾನ : ಸಚಿವ ಅರವಿಂದ ಲಿಂಬಾವಳಿ
ಸ್ನೇಹಿತರು ಮಾಡಿದ ಆರ್ಥಿಕ ಸಹಾಯದಿಂದ ಪದವಿ ಮುಗಿಸಿದ್ದಾರೆ. ನಾನು ಅನುಭವಿಸಿದ ಕಷ್ಟಗಳನ್ನು ತೃತೀಯ ಲಿಂಗಿಗಳು ಅನುಭವಿಸಬಾರದು, ಅವರ ಕಷ್ಟಗಳಿಗೆ ನಾನು ಧ್ವನಿಯಾಗಬೇಕು ಎಂಬ ಉದ್ದೇಶದಿಂದ ಮುಂದೆ ನಡೆಯುತ್ತೇನೆ. ನ್ಯಾಯಾಧೀಶೆಯಾಗಬೇಕೆಂಬುದು ನನ್ನ ಆಸೆ ಎಂದು ಈಟಿವಿ ಭಾರತ್ಗೆ ನೀಡಿದ ವಿಷೇಷ ಸಂದರ್ಶನದಲ್ಲಿ ಅವರು ತಮ್ಮ ಮನದ ಇಂಗಿತ ವ್ಯಕ್ತಪಡಿಸಿದ್ದಾರೆ.