ಮೈಸೂರು: ಹುಲಿಗಳೆರೆಡು ಹಸುಗಳನ್ನು ಹೊತ್ತೊಯ್ದು ತಿಂದು ಹಾಕಿರುವ ಘಟನೆ ಹೆಚ್. ಡಿ. ಕೋಟೆ ತಾಲೂಕಿನ ಆಲನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹಸುಗಳ ಮೇಲೆ ದಾಳಿ ಮಾಡಿ ಕೊಂದು ತಿಂದ ಹುಲಿಗಳು - Tiger attacks on cows
ಹುಲಿಗಳೆರೆಡು ಹಸುಗಳನ್ನು ಹೊತ್ತೊಯ್ದು ತಿಂದು ಹಾಕಿರುವ ಘಟನೆ ಹೆಚ್. ಡಿ. ಕೋಟೆ ತಾಲೂಕಿನ ಆಲನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹೆಚ್. ಡಿ. ಕೋಟೆಯ ಕಾಡಂಚಿನ ಗ್ರಾಮವಾದ ಆಲನಹಳ್ಳಿಯಲ್ಲಿ ಕಾಡಿನಿಂದ ಗ್ರಾಮಕ್ಕೆ ನುಗ್ಗಿದ ಎರಡು ಹುಲಿಗಳು, ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಎರಡು ಹಸುಗಳನ್ನು ಹೊತ್ತೊಯ್ದು ತಿಂದು ಹಾಕಿರುವ ಘಟನೆ ನಡೆದಿದೆ. ಈ ಹಸುಗಳು ಕೃಷ್ಣ ಎಂಬುವವರಿಗೆ ಸೇರಿದ್ದವಾಗಿದ್ದು, ರಾತ್ರಿ ವೇಳೆ ಈ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ.
ಈ ಘಟನೆಯಿಂದ ಗಾಬರಿಗೊಂಡಿರುವ ಗ್ರಾಮಸ್ಥರು ಮನೆಯಿಂದ ಹೊರಬರಲೂ ಹೆದರುತ್ತಿದ್ದಾರೆ. ಸದ್ಯ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳು ಪರಿಶೀಲನೆ ನಡೆಸಿ, ಹುಲಿಗಳ ಸೆರೆಗೆ ಕೆಲವೆಡೆ ಬೋನ್ ಗಳನ್ನು ಇರಿಸಿದ್ದಾರೆ.