ಕರ್ನಾಟಕ

karnataka

ETV Bharat / state

ಮೈಸೂರು: ಅನುಮಾನಸ್ಪದವಾಗಿ ನಾಲ್ಕು ಕೋತಿಗಳ ಸಾವು - Suspected deaths of four monkeys

ಮೈಸೂರಿನ ಚಾಮುಂಡಿ ಬೆಟ್ಟದ ಹಿಂಭಾಗದ ಉತ್ತನಹಳ್ಳಿ ಗ್ರಾಮದ ಪಕ್ಕದಲ್ಲಿರುವ ವಕೀಲರೊಬ್ಬರಿಗೆ ಸೇರಿದ ಫಾರ್ಮ್​ ಹೌಸ್​​ನಲ್ಲಿ, ನಾಲ್ಕು ಮಂಗಗಳ ಮೃತ ದೇಹಗಳು ಪತ್ತೆಯಾಗಿವೆ.

ಅನುಮಾನಸ್ಪದವಾಗಿ ನಾಲ್ಕು ಕೋತಿಗಳ ಸಾವು
ಅನುಮಾನಸ್ಪದವಾಗಿ ನಾಲ್ಕು ಕೋತಿಗಳ ಸಾವು

By

Published : Apr 20, 2020, 9:33 PM IST

ಮೈಸೂರು: ಖಾಸಗಿ ವ್ಯಕ್ತಿಗೆ ಸೇರಿದ ಫಾರ್ಮ್​​​ ಒಂದರಲ್ಲಿ ಅನುಮಾನಾಸ್ಪದವಾಗಿ 4 ಕೋತಿಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಉತ್ತನಹಳ್ಳಿ ಬಳಿಯ ಫಾರ್ಮ್​ನಲ್ಲಿ ನಡೆದಿದೆ.

ನಗರದ ಚಾಮುಂಡಿ ಬೆಟ್ಟದ ಹಿಂಭಾಗದ ಉತ್ತನಹಳ್ಳಿ ಗ್ರಾಮದ ಪಕ್ಕದಲ್ಲಿ ಇರುವ ವಕೀಲರೊಬ್ಬರಿಗೆ ಸೇರಿದ ಫಾರ್ಮ್​ ಹೌಸ್​​ನಲ್ಲಿ, ಇಂದು 4 ಕೋತಿಗಳ ಮೃತದೇಹಗಳು ಸಿಕ್ಕಿವೆ.

ಅನುಮಾನಸ್ಪದವಾಗಿ ನಾಲ್ಕು ಕೋತಿಗಳ ಸಾವು

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪಶು ವೈದ್ಯರ ತಂಡ ಹಾಗೂ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳು ಬರುವಷ್ಟರಲ್ಲಿ ಸತ್ತ ಮಂಗಗಳಲ್ಲಿ 2ನ್ನು ಫಾರ್ಮ್​ ಹೌಸ್​​ಗೆ ಸಂಬಂಧಿಸಿದ ವ್ಯಕ್ತಿಗಳು ಬೆಂಕಿ ಹಾಕಿ ಸುಟ್ಟು ಹಾಕಿದ್ದಾರೆ. ಇನ್ನೆರಡು ಮಂಗಗಳನ್ನು ಪಶು ವೈದ್ಯರ ತಂಡ ವಶಕ್ಕೆ ಪಡೆದು, ಮಂಗಗಳ ಮರಣೋತ್ತರ ಪರೀಕ್ಷೆಯನ್ನು ನಾಳೆ ಬೆಳಗ್ಗೆ ನಡೆಸಲಿದೆ.

ಸತ್ತ ಮಂಗಗಳ ಸ್ಯಾಂಪಲ್​​ಗಳನ್ನು ಶಿವಮೊಗ್ಗದ ಲ್ಯಾಬ್​​ಗೆ ಕಳುಹಿಸಿ, ಈ ಮಂಗಗಳ ಸಾವಿಗೆ ಕಾರಣ ಏನು ಅಥವಾ ಮಂಗನ‌ ಕಾಯಿಲೆಯೇ ಎಂಬುದು ತಿಳಿಯಲಿದೆ ಎಂದು ಪಶು ವೈದ್ಯ ಇಲಾಖೆಯ ಅಸಿಸ್ಟೆಂಟ್ ಡೈರಕ್ಟರ್ ಡಾ. ಸುರೇಶ್ ತಿಳಿಸಿದ್ದಾರೆ.

ABOUT THE AUTHOR

...view details