ಮೈಸೂರು: ಮೊಬೈಲ್ ಹೆಚ್ಚಾಗಿ ನೋಡಬೇಡ ಎಂದು ತಾಯಿ ಬುದ್ಧಿವಾದ ಹೇಳಿದ್ದಕ್ಕೆ ಮಗಳು ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಎನ್.ಆರ್.ಮೊಹಲ್ಲಾದ ಶಿವಾಜಿ ರಸ್ತೆಯಲ್ಲಿ ನಡೆದಿದೆ.
ಮೊಬೈಲ್ ಹೆಚ್ಚಾಗಿ ನೋಡಬೇಡ ಎಂದು ಹೇಳಿದ್ದಕ್ಕೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ! - Mysore
ಹೆಚ್ಚಾಗಿ ಮೊಬೈಲ್ ನೋಡಬೇಡ. ಓದಿನ ಕಡೆಯೂ ಗಮನ ಕೊಡು ಎಂದು ತಾಯಿ ಬುದ್ಧಿವಾದ ಹೇಳಿದ್ದಕ್ಕೆ ಮಗಳು ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಎನ್.ಆರ್.ಮೊಹಲ್ಲಾದ ಶಿವಾಜಿ ರಸ್ತೆಯಲ್ಲಿ ನಡೆದಿದೆ.
ಮೊಬೈಲ್ ಹೆಚ್ಚಾಗಿ ನೋಡಬೇಡ ಎಂದು ಹೇಳಿದ್ದಕ್ಕೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
ನಿಕಾನ್ (19) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಈಕೆ ವಿದ್ಯಾಶ್ರಮ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ದ್ವೀತಿಯ ಪಿಯುಸಿ ಓದುತ್ತಿದ್ದಳು. ಈ ವಿದ್ಯಾರ್ಥಿನಿ ಮನೆಯಲ್ಲಿ ಮೊಬೈಲ್ ಚಾಟೀಂಗ್ನಲ್ಲೇ ತೊಡಗುತ್ತಿದ್ದಳು. ಇದನ್ನು ಕಂಡ ತಾಯಿ ಹೆಚ್ಚಾಗಿ ಮೊಬೈಲ್ ನೋಡಬೇಡ, ಓದಿನ ಕಡೆಯೂ ಗಮನ ಕೊಡು ಎಂದು ಬುದ್ಧಿವಾದ ಹೇಳಿದ್ದಾರೆ. ಆದರೆ ಈ ವಿದ್ಯಾರ್ಥಿನಿ ಇದರಿಂದ ಮನನೊಂದು ತನ್ನ ಕೊಠಡಿಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ.
ಈ ಸಂಬಂಧ ಎನ್.ಆರ್.ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Sep 15, 2020, 11:00 AM IST