ಮೈಸೂರು:2022ರಲ್ಲಿ ಚೀನಾದ ಬೀಜಿಂಗ್ನಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್‌ಗೆ ಮೈಸೂರಿನ ಸ್ಕೇಟರ್ ಸಜ್ಜಾಗುತ್ತಿದ್ದಾರೆ. ಇತ್ತೀಚೆಗೆ ನಡೆದ ಐಸ್ ಸ್ಕೇಟಿಂಗ್ ವಿಶ್ವಕಪ್ನಲ್ಲಿ ಅದ್ವಿತೀಯ ಸಾಧನೆಗೈದು ಒಲಿಂಪಿಕ್ಸ್ ಕ್ವಾಲಿಫೈಯರ್ಗೂ ಇವರು ಆಯ್ಕೆಯಾಗಿದ್ದರು.
ನಗರದ ಲಕ್ಷ್ಮೀಪುರಂ ನಿವಾಸಿ ಆಕಾಶ್ ಆರಾಧ್ಯ ಕಳೆದ 24 ವರ್ಷಗಳಿಂದಲೂ ಸ್ಕೇಟಿಂಗ್ ಅಥ್ಲೀಟ್. 2010 ರಿಂದ 15 ರವರೆಗೆ ರೋಲರ್ ಸ್ಕೇಟಿಂಗ್ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. 2016ರಿಂದ ಇವರ ಚಿತ್ತ ಐಸ್ ಸ್ಕೇಟಿಂಗ್ನತ್ತ ಹೊರಳಿದ್ದು, ಇಲ್ಲಿಯೂ ವಿಶೇಷ ಸಾಧನೆ ಮಾಡಿದ್ದಾರೆ.
ಇದುವರೆಗೆ 18 ವರ್ಲ್ಡ್ ಕಪ್, 3 ವರ್ಲ್ಡ್ ಚಾಂಪಿಯನ್ಶಿಪ್, 1 ಏಷಿಯನ್ ಚಾಂಪಿಯನ್ಶಿಪ್ನಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ. ಮಾರ್ಚ್ನಲ್ಲಿ ವರ್ಲ್ಡ್ ಚಾಂಪಿಯನ್ಶಿಪ್ 500 ಮೀಟರ್ ವಿಭಾಗದಲ್ಲಿ 33ನೇ ರ್ಯಾಂಕ್ ಸಾಧಿಸಿದ್ದು, ಇದುವರೆಗಿನ ಅತಿದೊಡ್ಡ ಸಾಧನೆಯಾಗಿದೆ. ಇವರ ಸ್ಕೇಟಿಂಗ್ ಸಾಧನೆಗೆ 2016ರಲ್ಲಿ ಏಕಲವ್ಯ ಪ್ರಶಸ್ತಿಯೂ ದೊರೆತಿದೆ.