ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಒಪ್ಪಿದ ಶಂಕರಾಚಾರ್ಯರ ಪ್ರತಿಮೆಯ ತಯಾರಾಗುತ್ತಿದೆ. ಉತ್ತರಾಖಂಡದ ಕೇದಾರನಾಥ ಕ್ಷೇತ್ರದಲ್ಲಿ ಅದ್ವೈತ ತತ್ವ ಪ್ರತಿಪಾದಕ ಶಂಕರಚಾರ್ಯರು ಐಕ್ಯವಾದ ಸ್ಥಳದಲ್ಲಿ 'ಶ್ರೀ ಶಂಕರಾಚಾರ್ಯರ ಅಧ್ಯಯನ ಪೀಠ ಮತ್ತು ಮ್ಯೂಸಿಯಂ' ಸ್ಥಾಪನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ತೀರ್ಮಾನಿಸಿದ ಹಿನ್ನೆಲೆಯಲ್ಲಿ ಶಂಕರಾಚಾರ್ಯರ ಬೃಹತ್ ಪ್ರತಿಮೆ ನಿರ್ಮಾಣಕ್ಕೆ ದೇಶದಾದ್ಯಂತ ಹಲವು ಶಿಲ್ಪ ಕಲಾವಿದರನ್ನು ಆಹ್ವಾನಿಸಲಾಗಿತ್ತು.
ಅದರಲ್ಲಿ ಕರ್ನಾಟಕದ ನಾಲ್ಕು ಶಿಲ್ಪಿಗಳ ಹೆಸರನ್ನು ಸೂಚಿಸಲಾಗಿತ್ತು. ಅಂತಿಮವಾಗಿ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ಶಂಕರಾಚಾರ್ಯ ಪ್ರತಿಮೆ ಮಾಡುವ ಅವಕಾಶ ಒದಗಿ ಬಂದಿದೆ. 2020ರ ಸೆಪ್ಟೆಂಬರ್ನಲ್ಲಿ ಅರುಣ್ ಯೋಗಿರಾಜ್ ಅವರು ನಿರ್ಮಿಸಿದ 2 ಅಡಿ ಎತ್ತರದ ಶಂಕರಾಚಾರ್ಯ ಮೂರ್ತಿ ಮಾದರಿಯನ್ನು ಪ್ರಧಾನಿ ಮೋದಿ ಅವರಿಗೆ ನೋಡಲು ಕಳುಹಿಸಿದ್ದರು. ಇದನ್ನು ನೋಡಿದ ಮೋದಿ ಅವರು ಶಂಕರಾಚಾರ್ಯರ ಅವರ ಪ್ರತಿಮೆ ಮಾಡಲು ತಮ್ಮ ಇಲಾಖೆ ಮೂಲಕ ಅರುಣ್ ಯೋಗಿರಾಜ್ ಅವರಿಗೆ ಸೂಚನೆ ಕೊಟ್ಟಿದ್ದಾರೆ.