ಮೈಸೂರು: ಇತ್ತೀಚಿಗೆ ಮೈಸೂರು ಭಾಗದಲ್ಲಿ ಆನ್ಲೈನ್ ಮೂಲಕ ಹಣ ವಂಚನೆ ಮಾಡುವ ಪ್ರಕರಣಗಳು ಬೆಳಕಿಗೆ ಬಂದಿದ್ದು, ಹಣ ವಂಚನೆಯಾದ ಎರಡು ಗಂಟೆಯೊಳಗೆ ಪೊಲೀಸರಿಗೆ ದೂರು ನೀಡಿದರೆ ಪ್ರಕರಣ ಬೇಧಿಸಬಹುದು ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಇಂದು ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಇತ್ತೀಚಿಗೆ ಓಟಿಪಿ ವಂಚನೆ ಹಾಗೂ ಆನ್ ಲೈನ್ ಮೂಲಕ ಹಣ ವಂಚನೆ ಪ್ರಕರಣಗಳು ಬೆಳಕಿಗೆ ಬಂದಿವೆ.
ವಂಚನೆ ನಡೆದ ಕೂಡಲೇ ಸೈಬರ್ ಕ್ರೈಮ್ ಟೋಲ್ ಫ್ರೀ ನಂಬರ್ 1930ಗೆ ಕರೆ ಮಾಡಿ, ಇಲ್ಲ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿ. ನೀವು ವಂಚನೆ ನಡೆದ ಗೋಲ್ಡನ್ ಅವರ್‌ನಲ್ಲಿ ದೂರು ನೀಡಿದರೆ ಪ್ರಕರಣ ಬೇಧಿಸಲು ಸಾಧ್ಯವಾಗುತ್ತದೆ ಎಂದಿದ್ದಾರೆ.