ಮೈಸೂರು: ಉಗ್ರರ ದಾಳಿಯ ಭೀತಿಯ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಚಾಮುಂಡಿ ಬೆಟ್ಟಕ್ಕೆ ರಾತ್ರಿ 9ರ ನಂತರ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಡಿಸಿಪಿ ಮುತ್ತುರಾಜ್ ತಿಳಿಸಿದ್ದಾರೆ.
ಉಗ್ರ ರ ದಾಳಿ ಭೀತಿ: ಚಾಮುಂಡಿ ಬೆಟ್ಟಕ್ಕೆ ರಾತ್ರಿ 9ರ ನಂತರ ಪ್ರವೇಶ ನಿರ್ಬಂಧ - ಕೇಂದ್ರ ಗುಪ್ತಚರ ಇಲಾಖೆ
ದೇಶದಲ್ಲಿ ಉಗ್ರರ ದಾಳಿಯ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ ನೀಡಿದ ಮಾಹಿತಿಯಿಂದ ಅಲರ್ಟ್ ಆಗಿರುವ ಮೈಸೂರು ನಗರ ಪೊಲೀಸರು ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಚಾಮುಂಡಿ ಬೆಟ್ಟಕ್ಕೆ ರಾತ್ರಿ 9 ರ ನಂತರ ಭಕ್ತರ ಪ್ರವೇಶವನ್ನು ನಿರ್ಬಂಧಿಸಿದ್ದಾರೆ.
ಡಿಸಿಪಿ ಮುತ್ತುರಾಜ್ ಮಾತನಾಡಿದ್ದಾರೆ
ದೇಶದಲ್ಲಿ ಉಗ್ರರ ದಾಳಿಯ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ ನೀಡಿದ ಎಚ್ಚರಿಕೆಯ ಮಾಹಿತಿಯಿಂದ ಅಲರ್ಟ್ ಆಗಿರುವ ಮೈಸೂರು ನಗರ ಪೊಲೀಸರು ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಚಾಮುಂಡಿ ಬೆಟ್ಟಕ್ಕೆ ರಾತ್ರಿ 9 ಗಂಟೆಯ ನಂತರ ಸಾರ್ವಜನಿಕರ ಹಾಗೂ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಿದ್ದಾರೆ.
ಮುಖ್ಯ ದ್ವಾರದಲ್ಲಿ ಮಾತ್ರ 10 ಗಂಟೆ ನಂತರ ನಿರ್ಬಂಧ ಹೇರಲಾಗಿದೆ. ಆ ನಂತರ ಬಂದ ವಾಹನಗಳನ್ನು ಪೊಲೀಸರು ಪರಿಶೀಲನೆ ನಡೆಸಿ ಅವರನ್ನು ಬಿಡುತ್ತಾರೆ ಎಂದು ನಗರ ಕಾನೂನು ಸುವ್ಯವಸ್ಥೆಯ ಡಿಸಿಪಿ ಮುತ್ತುರಾಜ್ ತಿಳಿಸಿದ್ದಾರೆ.