ಮೈಸೂರು: ಮನೆ ಬಾಗಿಲ ಮುಂದೆ ಪೊಲೀಸರು ಬಂದರೆ ಎಲ್ಲರಿಗೂ ಭಯ ಶುರುವಾಗುತ್ತದೆ. ಆದರೆ, ಹೊಸ ವರ್ಷದ ದಿವಸ ಪೊಲೀಸರು ಕದ ತಟ್ಟಿದ್ದಕ್ಕೆ ಮನೆಯವರ ಮುಖದಲ್ಲಿ ಆತಂಕದ ಬದಲಿಗೆ ಸಂಭ್ರಮ ಮನೆ ಮಾಡಿತ್ತು.
ಕಳ್ಳತನದ ಮಾಲು ಒಪ್ಪಿಸಿದ ಡಿಸಿಪಿಗೆ ಅರಿಶಿನ-ಕುಂಕುಮ ಕೊಟ್ಟು ಸತ್ಕಾರ - Theft case
ಮೂರು ದಿನಗಳಲ್ಲಿ ಪ್ರಕರಣವೊಂದನ್ನು ಬೇಧಿಸಿ ಲಷ್ಕರ್, ಕೃಷ್ಣರಾಜ, ನರಸಿಂಹರಾಜ, ಮಂಡಿ ಠಾಣೆಗಳಲ್ಲಿ ದಾಖಲಾಗಿದ್ದ ಕಳವು ಪ್ರಕರಣಗಳ ಕಾರ್ಯಾಚರಣೆಯಲ್ಲಿ ಒಟ್ಟು 22 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 3 ಲಕ್ಷ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಚಿನ್ನಾಭರಣ ಕಳುವಾಗಿದ್ದಕ್ಕೆ ಸಂಬಂಧಿಸಿದ ಪ್ರಕರಣವನ್ನು ಪತ್ತೆ ಹಚ್ಚಿದ ಪೊಲೀಸರು ಮಾಲನ್ನು ವಾರಸುದಾರರಿಗೆ ಮರಳಿಸಿದರು. ಪೊಲೀಸರ ಕಾರ್ಯಕ್ಕೆ ಈ ಮೆಚ್ಚುಗೆ ವ್ಯಕ್ತಪಡಿಸಿ ಭಾವುಕರಾದ ಕುಟುಂಬಸ್ಥರು, ಡಿಸಿಪಿ ಗೀತಾ ಪ್ರಸನ್ನ ಅವರಿಗೆ ಅರಿಶಿನ-ಕುಂಕುಮ ನೀಡಿ ಕೃತಜ್ಞತೆ ಸಲ್ಲಿಸಿದರು.
ಮೂರು ದಿನಗಳಲ್ಲಿ ಪ್ರಕರಣವೊಂದನ್ನು ಬೇಧಿಸಿ ಲಷ್ಕರ್, ಕೃಷ್ಣರಾಜ, ನರಸಿಂಹರಾಜ, ಮಂಡಿ ಠಾಣೆಗಳಲ್ಲಿ ದಾಖಲಾಗಿದ್ದ ಕಳವು ಪ್ರಕರಣಗಳ ಕಾರ್ಯಾಚರಣೆಯಲ್ಲಿ ಒಟ್ಟು 22 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 3 ಲಕ್ಷ ನಗದು ವಶ ಪಡಿಸಿಕೊಂಡಿದ್ದಾರೆ. ಕಳುವಾದ ಮಾಲುಗಳನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ.
ಡಿಸಿಪಿ ಗೀತಾ ಪ್ರಸನ್ನ, ನರಸಿಂಹರಾಜ ಎಸಿಪಿ ಶಿವಶಂಕರ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆ ನಡೆದಿತ್ತು. ಲಷ್ಕರ್ ಠಾಣೆಯ ಇನ್ಸ್ಪೆಕ್ಟರ್ ಸುರೇಶ್ ಕುಮಾರ್, ಮಂಡಿ ಠಾಣೆ ಇನ್ಸ್ಪೆಕ್ಟರ್ ನಾರಾಯಣಸ್ವಾಮಿ, ಪಿಎಸ್ಐ ಧನಲಕ್ಷ್ಮಿ, ಶಬರೀಶ್ ಈ ಕಾರ್ಯದಲ್ಲಿ ಪಾಲ್ಗೊಂಡಿದ್ದರು.