ಮೈಸೂರು:ನೈಟ್ ಕರ್ಫ್ಯೂ ಉಲ್ಲಂಘಿಸಿ ಪಾರ್ಟಿ ಮಾಡುತ್ತಿದ್ದ ಆರೋಪದಡಿ 8 ಮಂದಿಯನ್ನು ವಿಜಯನಗರ ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನೈಟ್ ಕರ್ಫ್ಯೂ ಉಲ್ಲಂಘನೆ: ಮೈಸೂರಲ್ಲಿ 8 ಮಂದಿ ಅರೆಸ್ಟ್ - ಮೈಸೂರು ಲೇಟೆಸ್ಟ್ ನ್ಯೂಸ್
ನೈಟ್ ಕರ್ಫ್ಯೂ ಉಲ್ಲಂಘಿಸಿ ಪಾರ್ಟಿ ಮಾಡುತ್ತಿದ್ದ ಆರೋಪದ ಮೇಲೆ 8 ಮಂದಿಯನ್ನು ವಿಜಯನಗರ ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ.
![ನೈಟ್ ಕರ್ಫ್ಯೂ ಉಲ್ಲಂಘನೆ: ಮೈಸೂರಲ್ಲಿ 8 ಮಂದಿ ಅರೆಸ್ಟ್ ಮೈಸೂರಲ್ಲಿ 8 ಮಂದಿ ಬಂಧನ](https://etvbharatimages.akamaized.net/etvbharat/prod-images/768-512-11360639-thumbnail-3x2-bngjpg.jpg)
Mysore Police arrested 8 people who were break the Night curfew violation
ನೈಟ್ ಕರ್ಫ್ಯೂ ಉಲ್ಲಂಘಿಸಿ ಪಾರ್ಟಿ ಮಾಡುತ್ತಿದ್ದವರ ಬಂಧನ
ಕೆಲ ದಿನಗಳಿಂದ ರಾಜ್ಯದಲ್ಲಿ ಮತ್ತೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸಲು ಸರ್ಕಾರ 8 ನಗರಗಳಲ್ಲಿ ಶನಿವಾರದಿಂದ ನೈಟ್ ಕರ್ಫ್ಯೂ ಜಾರಿ ಮಾಡಿ ಆದೇಶ ಹೊರಡಿಸಿದೆ.
ಆದರೆ ಇಲ್ಲಿನ ವಿಜಯನಗರದಲ್ಲಿರುವ ಕರಣ್ ರೆಸಿಡೆನ್ಸಿಯಲ್ಲಿ ಯುವಕರು ರಾತ್ರಿ 12 ಗಂಟೆಯಾದರೂ ಪಾರ್ಟಿ ಮಾಡುತ್ತಿದ್ದರು. ಈ ಕುರಿತಂತೆ ಖಚಿತ ಮಾಹಿತಿ ಪಡೆದ ವಿಜಯನಗರ ಠಾಣಾ ಪೊಲೀಸರು 8 ಜನರನ್ನು ಬಂಧಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ವೇಳೆ ಮದ್ಯದ ಬಾಟಲಿಗಳನ್ನು ಸಹ ವಶಕ್ಕೆ ಪಡೆದಿದ್ದಾರೆ.
Last Updated : Apr 11, 2021, 9:35 AM IST