ಮೈಸೂರು: ಲಾಕ್ಡೌನ್ ಹಾಗೂ ಕೊರೊನಾ ಹಾವಳಿಯಿಂದ ಆದಾಯ ಕುಸಿತ ಆಗಿರುವುದರಿಂದ,ಮೈಸೂರು ಅರಮನೆ ಪ್ರವೇಶ ಟಿಕೆಟ್ ದರ ಏರಿಕೆ ಮಾಡಲಾಗಿದೆ. ಇಂದಿನಿಂದಲೇ ಅರಮನೆ ಮಂಡಳಿಯು ದರ ಹೆಚ್ಚಳ ಮಾಡಿದೆ.
ಅರಮನೆ ಪ್ರವೇಶ ದರ 70 ರೂ. ನಿಂದ 100 ಕ್ಕೆ ಏರಿಕೆಯಾಗಿದೆ. ಪೋಷಕರ ಜೊತೆ ಆಗಮಿಸುವ ಮಕ್ಕಳಿಗೆ ಹಳೆಯ ದರ 30, ಈಗ ಹೊಸ ದರ 50 ರೂ ನಿಗದಿ ಮಾಡಲಾಗಿದೆ. ಶಾಲಾ ಮಕ್ಕಳಿಗೆ ಹಳೆಯ ದರ 20 ರೂ. ಇತ್ತು ಹೊಸ ದರ 30ರೂ. ಆಗಿದೆ. ಕನ್ನಡದ ಧ್ವನಿ ಮತ್ತು ಬೆಳಕು ಕಾರ್ಯಕ್ರಮದಲ್ಲಿ ಯಾವುದೇ ಏರಿಕೆ ಇಲ್ಲ. ಇಂಗ್ಲಿಷ್ ಧ್ವನಿ ಮತ್ತು ಬೆಳಕು ಕಾರ್ಯಕ್ರಮದ ದರ 120 ರೂ ನಿಗದಿ ಮಾಡಲಾಗಿದೆ.