ಕರ್ನಾಟಕ

karnataka

ETV Bharat / state

ಅರಮನೆಯಲ್ಲಿ ರತ್ನ ಖಚಿತ ಸಿಂಹಾಸನ ಜೋಡಣೆ, 29ರಿಂದ ಯದುವೀರ್​ ಖಾಸಗಿ ದರ್ಬಾರ್​ - ಸಿಂಹಾಸನ ಜೋಡಣೆ

ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಇನ್ನೂ ಕೇವಲ 4 ದಿನಗಳು ಉಳಿದಿದ್ದು ಇಂದು ಅರಮನೆಯ ದರ್ಬಾರ್ ಹಾಲ್ ನಲ್ಲಿ ಬೆಳಗ್ಗೆ 10:45 ರಿಂದ 11:30 ರ ಒಳಗಿನ ಶುಭ ವೃಶ್ಚಿಕ ಲಗ್ನದಲ್ಲಿ ಸಿಂಹಾಸನವನ್ನು ಜೋಡಣೆ ಮಾಡಲಾಯಿತು.

ಸಿಂಹಾಸನ

By

Published : Sep 24, 2019, 4:34 PM IST

ಮೈಸೂರು:ರತ್ನ ಖಚಿತ ಸಿಂಹಾಸನವನ್ನು ಇಂದು ದರ್ಬಾರ್ ಹಾಲ್ ನಲ್ಲಿ ಶುಭ ವೃಶ್ಚಿಕ ಲಗ್ನದಲ್ಲಿ ರಾಜಮಾತೆ ಪ್ರಮೋದಾದೇವಿ ಒಡೆಯರ್ ಉಸ್ತುವಾರಿಯಲ್ಲಿ ಜೋಡಣೆ ಮಾಡಲಾಯಿತು.

ಚಿನ್ನದ ಸಿಂಹಾಸನ

ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಇನ್ನೂ ಕೇವಲ 4 ದಿನಗಳು ಉಳಿದಿದ್ದು ಇಂದು ಅರಮನೆಯ ದರ್ಬಾರ್ ಹಾಲ್ ನಲ್ಲಿ ಬೆಳಗ್ಗೆ 10:45 ರಿಂದ 11:30 ರ ಒಳಗಿನ ಶುಭ ವೃಶ್ಚಿಕ ಲಗ್ನದಲ್ಲಿ ಸಿಂಹಾಸನವನ್ನು ಜೋಡಣೆ ಮಾಡಲಾಯಿತು.

ಇದಕ್ಕೂ ಮುನ್ನ ಬೆಳಗ್ಗೆ ಅರಮನೆಯಲ್ಲಿ‌ ಸಿಂಹಾಸನ ಜೋಡಣೆಗೂ ಮುನ್ನ ಗಣಪತಿ ಹೋಮ, ನವಗ್ರಹ ಹೋಮ, ಶಾಂತಿ ಹೋಮಗಳು ನಡೆದವು. ಆ ನಂತರ ಅರಮನೆಯ ನೆಲ ಮಾಳಿಗೆಯ ಬಿಡಿ ಭಾಗಗಳಲ್ಲಿ ಇದ್ದ ಸಿಂಹಾಸನವನ್ನು ದರ್ಬಾರ್ ಹಾಲ್​ಗೆ ತರಲಾಯಿತು. ಸಂಪ್ರದಾಯದಂತೆ ಸಿಂಹಾಸನವನ್ನು ಜೋಡಿಸುವ ಗೆಜ್ಜಗಹಳ್ಳಿ ಗ್ರಾಮಸ್ಥರು ಕಾರ್ಯ ಪೂರ್ಣಗೊಳಿಸಿದರು.

ಈ‌ ಸಂದರ್ಭದಲ್ಲಿ ಅರಮನೆಯ ಪುರೋಹಿತರು, ಜ್ಯೋತಿಷಿಗಳು ಹಾಗೂ ಧರ್ಮಾಧಿಕಾರಿಗಳು ಇದ್ದರು.‌ ಪ್ರಮೋದಾದೇವಿ ಒಡೆಯರ್ ಅವರ ಉಸ್ತುವಾರಿಯಲ್ಲಿ ಸಿಂಹಾಸನ ಜೋಡಣೆ ಮಾಡಲಾಯಿತು. ಈ ಸಂದರ್ಭದಲ್ಲಿ ದರ್ಬಾರ್ ಹಾಲ್ ನಲ್ಲಿದ್ದ ಸಿಸಿಟಿವಿಗಳಿಗೂ ಪರದೆ ಹಾಕಲಾಗಿತ್ತು. ಈ ತಿಂಗಳ 29 ರಂದು ನವರಾತ್ರಿ ಮೊದಲ ದಿನ ಪಾಡ್ಯಮಿಯಂದು ಈ ಸಿಂಹಾಸನಕ್ಕೆ ಪೂಜೆ ಸಲ್ಲಿಸಿ ನಂತರ ಸಿಂಹಾಸನ ಜೋಡಣೆ ಮಾಡಿ ಧಾರ್ಮಿಕ ವಿಧಿವಿಧಾನಗಳೊಂದಿಗೆ 9 ದಿನಗಳ ಕಾಲ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್ ನಡೆಸಲಿದ್ದಾರೆ.

ABOUT THE AUTHOR

...view details