ಮೈಸೂರು: ಬಂಡಿಪಾಳ್ಯದ ಎಪಿಎಂಸಿ ಮಾರುಕಟ್ಟೆಯ ಏಜೆಂಟ್ ಎಂ.ಜೆ. ರವಿ (35) ಅವರನ್ನು ಮಂಗಳವಾರ ಬರ್ಬರವಾಗಿ ಕೊಲೆ ಮಾಡಲಾಗಿದೆ. ಎಪಿಎಂಸಿ ಮಳಿಗೆಯಲ್ಲಿ ಕರ್ತವ್ಯ ನಿರತರಾಗಿದ್ದಾಗಲೇ ಈ ದುಷ್ಕೃತ್ಯ ನಡೆದಿದೆ. ಉತ್ತನಹಳ್ಳಿಯಲ್ಲಿ ವಾಸವಾಗಿದ್ದ ಎಂ.ಜೆ.ರವಿ ಮೂಲತಃ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ನಿವಾಸಿಯಾದರು.
ಮೈಸೂರು: ಕರ್ತವ್ಯದಲ್ಲಿದ್ದಾಗಲೇ ಎಪಿಎಂಸಿ ಏಜೆಂಟ್ ರವಿ ಬರ್ಬರ ಹತ್ಯೆ - APMC Agent Murder
ಎಂ.ಜೆ.ರವಿ ಎಪಿಎಂಸಿ ಮಳಿಗೆಯಲ್ಲಿ ಕರ್ತವ್ಯ ನಿರತರಾಗಿದ್ದಾಗಲೇ ಕೊಲೆ ಮಾಡಲಾಗಿದೆ. ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.
ಎಪಿಎಂಸಿ ಏಜೆಂಟ್ ರವಿ ಬರ್ಬರ ಹತ್ಯೆ
ಮೃತರಿಗೆ ತಂದೆ-ತಾಯಿ, ಪತ್ನಿ, ಮೂವರು ಮಕ್ಕಳು, ಸಹೋದರಿ ಇದ್ದಾರೆ. ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಎಎಸ್‌ಪಿ ಶಿವಕುಮಾರ್ ಆರ್. ದಂಡಿನ, ದಕ್ಷಿಣ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್, ಸಿಬ್ಬಂದಿ ಬಂದು ಸ್ಥಳ ಮಹಜರು ಮಾಡಿದ್ದಾರೆ.
ಇದನ್ನೂ ಓದಿ:ರೈಲು ನಿಲ್ಲಿಸಿ ಮದ್ಯ ಸೇವಿಸಲು ತೆರಳಿದ ಲೋಕೋ ಪೈಲಟ್.. ಒಂದು ಗಂಟೆ ರೈಲ್ವೆ ನಿಲ್ದಾಣದಲ್ಲಿ ನಿಂತ ಟ್ರೈನ್!