ಮೈಸೂರು: ಸಿದ್ದರಾಮಯ್ಯನವರು ಯಾರನ್ನೂ ಮೆಚ್ಚಿಸುವುದಕ್ಕೆ ಉಡಾಫೆ ಮಾತುಗಳನ್ನು ಆಡುವುದು ಬೇಡ. 5 ವರ್ಷ ಸಿಎಂ ಆಗಿ ಆಡಳಿತ ನಡೆಸಿದವರು ನೋಡಿಕೊಂಡು ಮಾತಾನಾಡಬೇಕು ಎಂದು ಸಚಿವ ವಿ.ಸೋಮಣ್ಣ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಇಷ್ಟು ದಿನ ಟೋಪಿ ಹಾಕಿಕೊಂಡೇ ಬಂದಿದ್ದೇವೆ.. ಸಚಿವ ವಿ ಸೋಮಣ್ಣ ಮಾತಿನ ಮರ್ಮವೇನು?
ಸ್ವಾತಂತ್ರ್ಯ ಬಂದು 73 ವರ್ಷಗಳು ಆದಮೇಲೂ ಅಂದಿನ ಹಾಡಿಗಳು ಇಂದಿಗೂ ಅದೇ ರೀತಿ ಇವೆ. ಆ ದಿನದಿಂದಲೂ ಭಾಷಣ ಮಾಡಿಕೊಂಡು, ಸುಳ್ಳು ಹೇಳಿಕೊಂಡು, ಟೋಪಿ ಹಾಕಿಕೊಂಡು ಬಂದಿದ್ದೇವೆ. ಇನ್ನೂ ಮುಂದೆ ಈ ಟೋಪಿಗೆ ಅವಕಾಶ ಇಲ್ಲ. ನಮ್ಮ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನು ತಾಲೂಕಿನ ಅಭಿವೃದ್ಧಿಗೆ ಗಮನ ನೀಡಿತ್ತೇವೆ.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ,ಪಿರಿಯಾಪಟ್ಟಣ ತಾಲೂಕಿನ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆ ಮಾತಾನಾಡಿದ ಅವರು, ಸ್ವಾತಂತ್ರ್ಯ ಬಂದು 73 ವರ್ಷಗಳು ಆದಮೇಲೂ ಅಂದಿನ ಹಾಡಿಗಳು ಇಂದಿಗೂ ಅದೇ ರೀತಿ ಇವೆ. ಆ ದಿನದಿಂದಲೂ ಭಾಷಣ ಮಾಡಿಕೊಂಡು, ಸುಳ್ಳು ಹೇಳಿಕೊಂಡು, ಟೋಪಿ ಹಾಕಿಕೊಂಡು ಬಂದಿದ್ದೇವೆ. ಇನ್ನೂ ಮುಂದೆ ಈ ಟೋಪಿಗೆ ಅವಕಾಶ ಇಲ್ಲ. ನಮ್ಮ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನು ತಾಲೂಕಿನ ಅಭಿವೃದ್ಧಿಗೆ ಗಮನ ನೀಡಿತ್ತೇವೆ. ಇದನ್ನು ಸಿಎಂ ಯಡಿಯೂರಪ್ಪರ ಗಮನಕ್ಕೆ ತಂದು ಈ ಹಾಡಿಗಳ ಜನರ ಜೀವನಮಟ್ಟವನ್ನು ಸುಧಾರಿಸಲು ಹಲವಾರು ಕಾರ್ಯಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಸೋಮಣ್ಣ ಹೇಳಿದರು.
ಇತ್ತೀಚೆಗೆ ಸಿದ್ದರಾಮಯ್ಯ ಯಾರನೋ ಮೆಚ್ಚಿಸುವುದಕ್ಕೆ ಉಡಾಫೆ ಮಾತುಗಳನ್ನು ಆಡುತ್ತಿದ್ದಾರೆ. ಇದು ಸರಿಯಲ್ಲ. ಅವರು ಸಹ 5 ವರ್ಷ ಸಿಎಂ ಆಗಿದ್ದವರು. ನೋಡಿ ಮಾತಾನಾಡಬೇಕು ಎಂದು ಸಿದ್ದರಾಮಯ್ಯ ವಿರುದ್ಧ ಸಚಿವ ಸೋಮಣ್ಣ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.