ಮೈಸೂರು: ನಿರಾಶ್ರಿತರಿಗೆ ಹಾಗೂ ಬಡವರಿಗೆ ಉಚಿತ ಆಹಾರ ನೀಡಬೇಕಾದರೆ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದು ಮೈಸೂರು ಮಹಾನಗರ ಪಾಲಿಕೆ ಆದೇಶ ಹೊರಡಿಸಿದೆ.
ನಿರಾಶ್ರಿತರು, ಬಡವರಿಗೆ ಆಹಾರ ವಿತರಿಸುವಿರೇ? ಹಾಗಾದ್ರೆ ಈ ನಿಯಮ ಪಾಲಿಸಿ: ಮೈಸೂರು ಪಾಲಿಕೆ - ಮೈಸೂರು ಮಹಾನಗರ ಪಾಲಿಕೆ ಹೊಸ ಆದೇಶ
ಆಹಾರ ವಿತರಣೆಗೆ ಸಮಯ ನಿಗದಿಗೊಳಿಸಲಾಗಿದೆ. ಬೆಳಗ್ಗೆ 8 ರಿಂದ 11ರವರೆಗೆ, ಮಧ್ಯಾಹ್ನ 12.30 ರಿಂದ 2.30ರ ವರೆಗೆ ಹಾಗೂ ಸಂಜೆ 6 ರಿಂದ 8ರ ವರೆಗೆ ಮಾತ್ರ ಆಹಾರ ನೀಡಬೇಕು. ಯಾರೇ ಉಚಿತವಾಗಿ ಆಹಾರ ವಿತರಿಸಬೇಕಾದರೆ ವಲಯ ಕಚೇರಿಯ ಅಧಿಕಾರಿಗಳ ಪೂರ್ವಾನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು ಎಂದು ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಆದೇಶ ಹೊರಡಿಸಿದ್ದಾರೆ.
ಮೈಸೂರು ಮಹಾನಗರ ಪಾಲಿಕೆ
ಬಡವರ ಪಾಲಿಗೆ ನೆರವಾಗಿದ್ದ ಸಂಘ ಸಂಸ್ಥೆಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ನಗರ ಪಾಲಿಕೆಯು, ಕೋವಿಡ್ ನಿಯಮ ಉಲ್ಲಂಘಿಸುತ್ತಿರುವ ಹಿನ್ನೆಲೆಯಲ್ಲಿ ನಿಗದಿತ ಸ್ಥಳದಲ್ಲಿ ಮಾತ್ರ ಆಹಾರ ವಿತರಣೆಗೆ ಅವಕಾಶ ನೀಡಿದೆ. ಎಲ್ಲೆಂದರಲ್ಲಿ ಇನ್ಮುಂದೆ ಆಹಾರ ವಿತರಣೆ ಮಾಡುವಂತಿಲ್ಲ. ವಸ್ತು ಪ್ರದರ್ಶನ ಆವರಣ ಮುಂಭಾಗ, ಜೆ.ಕೆ ಮೈದಾನದಲ್ಲಿ ಮಾತ್ರ ನೀಡಲು ಅವಕಾಶ ನೀಡಿದೆ.