ಕರ್ನಾಟಕ

karnataka

ಮೈಸೂರು: 12 ವರ್ಷಕ್ಕೊಮ್ಮೆ ಜರುಗುವ ಪಂಚಲಿಂಗ ದರ್ಶನದ ಪೂರ್ವಭಾವಿ ಸಭೆ

By

Published : Jun 4, 2020, 6:01 PM IST

12 ವರ್ಷಕ್ಕೊಮ್ಮೆ ನಡೆಯುವ ವಿಶ್ವಪ್ರಸಿದ್ಧ ತಲಕಾಡು ಪಂಚಲಿಂಗ ದರ್ಶನ ಆಚರಣೆಯ ಸಿದ್ಧತೆಗಾಗಿ ತಲಕಾಡಿನ ಶಿವಪಾರ್ವತಿ ಕಲ್ಯಾಣ ಮಂಟಪದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು. ಡಿಸೆಂಬರ್ ತಿಂಗಳಲ್ಲಿ ನಡೆಯುವ ಈ ಆಚರಣೆಯಲ್ಲಿ ಯಾವುದೇ ತೊಂದರೆ ಉಂಟಾಗದಂತೆ ವ್ಯವಸ್ಥೆ ಮಾಡುವಂತೆ ಸಚಿವ ಎಸ್ ಟಿ ಸೋಮಶೇಖರ್ ಅಧಿಕಾರಿಗಳಿಗೆ ಸೂಚಿಸಿದರು.

Meeting for panchalinga Darshana
Meeting for panchalinga Darshana

ಮೈಸೂರು: 12 ವರ್ಷಕ್ಕೊಮ್ಮೆ ಜರುಗುವ ಪಂಚಲಿಂಗ ದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರು ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದರು.

ಕೋವಿಡ್-19 ಭೀತಿಯ ನಡುವೆ ವಿಶ್ವಪ್ರಸಿದ್ಧ ತಲಕಾಡು ಪಂಚಲಿಂಗ ದರ್ಶನ ಆಚರಣೆಯ ಸಿದ್ಧತೆಗಾಗಿ ತಲಕಾಡಿನ ಶಿವಪಾರ್ವತಿ ಕಲ್ಯಾಣ ಮಂಟಪದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು. ಸಭೆಯಲ್ಲಿ ಮಾತನಾಡಿದ ಸಚಿವರು, 2020ನೇ ಡಿಸೆಂಬರ್ ತಿಂಗಳಿನಲ್ಲಿ ನಡೆಯಲಿರುವ ಪಂಚಲಿಂಗ ದರ್ಶನಕ್ಕಾಗಿ ವಿವಿಧ ಇಲಾಖೆಗಳಿಗೆ-ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಿದ್ದು, ಯಾವುದೇ ತೊಂದರೆ ಉಂಟಾಗದಂತೆ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಂಚಲಿಂಗ ದರ್ಶನಕ್ಕಾಗಿ ಇನ್ನು ಐದು ತಿಂಗಳು ಬಾಕಿ ಇದ್ದು, ಕೊರೊನಾ ಭೀತಿ ನಡುವೆ ದೇಶದ ಮೂಲೆಗಳಿಂದ ಬರುವ ಭಕ್ತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಯಾವುದೇ ಅಡಚಣೆ ಉಂಟಾಗದಂತೆ ಕಾರ್ಯಕ್ರಮದ ಯೋಜನೆ ರೂಪಿಸಬೇಕು ಎಂದು ಸಲಹೆ ನೀಡಿದರು.

ABOUT THE AUTHOR

...view details