ಕರ್ನಾಟಕ

karnataka

ETV Bharat / state

ಮೈಸೂರು ಡಿಸಿ ವಿರುದ್ಧ ಮೇಯರ್ ಗರಂ... ಕಾರಣ ಏನು ಗೊತ್ತಾ!? - ಮೈಸೂರು ಜಿಲ್ಲಾಧಿಕಾರಿಗಳ ವಿರುದ್ಧ ಮೇಯರ್ ಗರಂ

ದಸರಾ ಉದ್ಘಾಟನೆಗೆ ಆಗಮಿಸಿದ ಸಿಎಂ ಅವರನ್ನು ರಿಸೀವ್ ಮಾಡಲು ವಿಮಾನ ನಿಲ್ದಾಣಕ್ಕೆ ಹೋದಾಗ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಮೇಯರ್​​ ಅವರನ್ನು ಒಳಗೆ ಬಿಡಬೇಡಿ ಎಂದು ಪೋಲಿಸರಿಗೆ ಹೇಳಿ ತಡೆದಿದ್ದಾರೆ. ಡಿಸಿ ಪ್ರೋಟೋಕಾಲ್ ಉಲ್ಲಂಘಿಸಿದ್ದಾರೆ ಎಂದು ಮೇಯರ್​ ಗರಂ ಆಗಿದ್ದಾರೆ.

Mysore mayor
ಮೈಸೂರು ಮೇಯರ್

By

Published : Oct 21, 2020, 3:23 PM IST

Updated : Oct 21, 2020, 3:48 PM IST

ಮೈಸೂರು:ಜಿಲ್ಲಾಧಿಕಾರಿಗಳಿಗೆ ಪ್ರೋಟೋಕಾಲ್ ಗೊತ್ತಿಲ್ಲ, ಸಿಎಂ ಅವರನ್ನು ರಿಸೀವ್ ಮಾಡಲು ಹೋದಾಗ ಜಿಲ್ಲಾಧಿಕಾರಿ ಮೇಯರನ್ನು ಒಳಗೆ ಬಿಡಬೇಡಿ ಎಂದು ಪೊಲೀಸರಿಗೆ ಹೇಳಿ ಪ್ರೋಟೋಕಾಲ್ ಉಲ್ಲಂಘನೆ ಮಾಡಿದ್ದಾರೆ ಎಂದು ಮೇಯರ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಗರಂ ಆಗಿದ್ದಾರೆ.

ಮೈಸೂರು ಡಿಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮೇಯರ್

ದಸರಾ ಉದ್ಘಾಟನೆಗೆ ಆಗಮಿಸಿದ ಸಿಎಂ ಅವರನ್ನು ರಿಸೀವ್ ಮಾಡಲು ವಿಮಾನ ನಿಲ್ದಾಣಕ್ಕೆ ಹೋದಾಗ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಮೇಯರನ್ನು ಒಳಗೆ ಬಿಡಬೇಡಿ ಎಂದು ಪೊಲೀಸರಿಗೆ ಹೇಳಿ ತಡೆದಿದ್ದಾರೆ, ಸಿಎಂ ಅನ್ನು ರಿಸೀವ್ ಮಾಡಲು 5 ಜನರನ್ನು ಮಾತ್ರ ಬಿಡುತ್ತೀವಿ ಎಂದರು. ಅಲ್ಲೂ ಸಹ ಪ್ರೋಟೋಕಾಲ್ ಅನ್ನು ಉಲ್ಲಂಘನೆ ಮಾಡಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಚಾಮುಂಡಿ ಬೆಟ್ಟದ ವೇದಿಕೆಯಲ್ಲಿ ಉಸ್ತುವಾರಿ ಸಚಿವರ ಪಕ್ಕದಲ್ಲಿ ನಮಗೆ ಆಸನ ಇರಬೇಕು ಅಲ್ಲೂ ಸಹ ನಮ್ಮನ್ನು ಕೊನೆಯಲ್ಲಿ ಹಾಕಿದ್ದಾರೆ. ಎರಡೂ ಕಡೆ ಮೇಯರ್​ಗೆ ಜಿಲ್ಲಾಧಿಕಾರಿ ಅವಮಾನ ಮಾಡಿದ್ದಾರೆ. ಈ ರೀತಿ ಕೆಲಸ ಯಾಕೆ ಮಾಡುತ್ತಿದ್ದಾರೆ, ಯಾರನ್ನು ಮನವೊಲಿಸಲು ಎಂದು ಗೊತ್ತಿಲ್ಲ, ಎಂದು ಮೇಯರ್ ತಸ್ನೀಂ ಜಿಲ್ಲಾಧಿಕಾರಿ ವಿರುದ್ಧ ಕಿಡಿಕಾರಿದ್ದಾರೆ.

ಇನ್ನು ರಾಷ್ಟ್ರೀಯ ಹೆದ್ದಾರಿಯ ಸರ್ಕಲ್​ಗಳಿಗೆ ಕೇಂದ್ರ ಸರ್ಕಾರ ಸೂಚಿಸಿರುವ ಹೆಸರು ಇಡಬೇಕು ಎಂದು ಸುತ್ತೋಲೆ ಇಲ್ಲ. ಆ ರೀತಿ ಗೈಡ್​ಲೈನ್ಸ್ ಇದ್ದರೆ ಸಂಸದರು ಪಾಲಿಕೆಗೆ ನೀಡಲಿ ಅದನ್ನು ಫಾಲೋಅಪ್ ಮಾಡುತ್ತೇವೆ ಎಂದು ಸಂಸದ ಪ್ರತಾಪ್ ಸಿಂಹ ಬರೆದ ಪತ್ರಕ್ಕೆ ಪ್ರತಿಕ್ರಿಯೆ ನೀಡಿದರು

Last Updated : Oct 21, 2020, 3:48 PM IST

ABOUT THE AUTHOR

...view details