ಕರ್ನಾಟಕ

karnataka

ETV Bharat / state

ಮೈಸೂರು : ಸುಖಾಂತ್ಯ ಕಂಡ ಅರ್ಧದಲ್ಲೇ ಮದುವೆ ನಿಂತ ಪ್ರಕರಣ - ಮೈಸೂರಿನಲ್ಲಿ ಮದುವೆ ಬೇಡ ಎಂದ ಹುಡುಗಿ

ತಾಳಿ ಕಟ್ಟುವಾಗ ಹುಡುಗಿ ಮದುವೆ ಬೇಡ ಎಂದ ಪ್ರಕರಣ ಇದೀಗ ಸುಖಾಂತ್ಯ ಕಂಡಿದೆ. ಮದುವೆಯ ನಷ್ಟವನ್ನು ಹುಡುಗಿಯ ಕಡೆಯವರು ಭರಿಸಿದ ಪರಿಣಾಮ ಹಣ ಹಾಗೂ ಚಿನ್ನಾಭರಣವನ್ನು ವಾಪಸ್ ಪಡೆದು ವರನ ಕುಟುಂಬಸ್ಥರು ಹೆಚ್.ಡಿ.ಕೋಟೆಗೆ ವಾಪಸ್ ಮರಳಿದ್ದಾರೆ..

marriage stopped in middle case problem solved in the police station
ಅರ್ಧದಲ್ಲೇ ಮದುವೆ ನಿಂತ ಪ್ರಕರಣ ಕೊನೆಗೂ ಸುಖಾಂತ್ಯ

By

Published : May 22, 2022, 7:53 PM IST

ಮೈಸೂರು :ತಾಳಿ ಕಟ್ಟುವಾಗ ಒಲ್ಲೇ ಎಂದು ಮದುವೆ ನಿಲ್ಲಿಸಿದ್ದ ಪ್ರಕರಣ ಸುಖ್ಯಾಂತ ಕಂಡಿದೆ. ಎರಡು ಕುಟುಂಬಸ್ಥರು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಂಡಿದ್ದಾರೆ. ವಧುವಿನ ಮನೆಯವರು ವರನ ಕಡೆಯವರು ನೀಡಿದ್ದ ಆಭರಣವನ್ನು ವಾಪಸ್ ನೀಡಿ, ಮದುವೆಯ ನಷ್ಟವನ್ನು ಭರಿಸಿದ್ದಾರೆ. ಹಣ ಹಾಗೂ ಚಿನ್ನಾಭರಣವನ್ನು ವಾಪಸ್ ಪಡೆದು ವರನ ಕುಟುಂಬಸ್ಥರು ಹೆಚ್.ಡಿ.ಕೋಟೆಗೆ ವಾಪಸ್ ಮರಳಿದ್ದಾರೆ. ವಧುವಿನ ಕುಟುಂಬಸ್ಥರು ಆಟೋದಲ್ಲಿ ಮನೆಗೆ ವಾಪಸ್ ಹೋಗಿದ್ದಾರೆ. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.

ಸುಖಾಂತ್ಯ ಕಂಡ ಅರ್ಧದಲ್ಲೇ ಮದುವೆ ನಿಂತ ಪ್ರಕರಣ..

ಏನಿದು ಘಟನೆ?: ಮದುವೆ ಮಂಟಪದಲ್ಲಿ ಮಂಗಳಸೂತ್ರ ಕಟ್ಟುವಾಗ ಕುಸಿದು ಬಿದ್ದಂತೆ ನಾಟಕ ಮಾಡಿ ಬಳಿಕ ವಧು ಲವರ್​​ನನ್ನೇ ಮದುವೆಯಾಗುವೆ ಎಂದು ಪಟ್ಟು ಹಿಡಿದಿದ್ದಾಳೆ. ಮೈಸೂರಿನ ವಿದ್ಯಾಭಾರತಿ ಕಲ್ಯಾಣ ಮಂಟಪದಲ್ಲಿ ಮದುವೆ ನಡೆಯುತ್ತಿತ್ತು.

ಈಕೆಯ ಪ್ರೇಮದ ವಿಚಾರ ತಿಳಿದ ವರನ ಕುಟುಂಬಸ್ಥರು, ಮದುವೆ ರದ್ದು ಮಾಡಿ ಖರ್ಚಿನ ಹಣ ನೀಡುವಂತೆ ಠಾಣೆ ಮೆಟ್ಟಿಲೇರಿದ್ದರು. ಈ ಪ್ರಕರಣ ಕೊನೆಗೂ ಸುಖ್ಯಾಂತ ಕಂಡಿದೆ.

ಇದನ್ನೂ ಓದಿ:ತಾಳಿ ಕಟ್ಟುವ ಶುಭ ವೇಳೆ ವಧು ಯುಟರ್ನ್​.. ಪಕ್ಕದ ಮನೆಯವನನ್ನೇ ಮದುವೆ ಆಗೋದಾಗಿ ಹೈಡ್ರಾಮಾ!

ABOUT THE AUTHOR

...view details