ಮೈಸೂರು:ಮಾನಸ ಗಂಗೋತ್ರಿ ಕ್ಯಾಂಪಸ್ದಲ್ಲಿನ ಪಾರಂಪರಿಕ ಜಯಲಕ್ಷ್ಮಿ ವಿಲಾಸ ಅರಮನೆ ಶಿಥಿಲಾವಸ್ಥೆಗೆ ತಲುಪಿದ್ದು, ಅದನ್ನು ಹಂತ ಹಂತವಾಗಿ 30 ಕೋಟಿ ರೂ ವೆಚ್ಚದಲ್ಲಿ ನವೀಕರಿಸಲಾಗುವುದು. ಈ ನವೀಕರಣಕ್ಕಾಗಿ ಇಂದು ಮೈಸೂರು ವಿಶ್ವವಿದ್ಯಾನಿಲಯ, ಶಾ ಫೌಂಡೇಶನ್ ಹಾಗೂ ಡೆಕ್ಕನ್ ಹೆರಿಟೇಜ್ ಫೌಂಡೇಷನ್ವು ಒಡಂಬಡಿಕೆ ಮಾಡಿಕೊಂಡಿವೆ ಎಂದು ಮೈಸೂರು ವಿವಿ ಉಪಕುಲಪತಿ ಎನ್ ಕೆ.ಲೋಕನಾಥ್ ಮಾಹಿತಿ ನೀಡಿದರು.
ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಒಡಂಬಡಿಕೆಗೆ ಸಹಿ ಹಾಕಿದ ನಂತರ ಮಾತನಾಡಿದ ಅವರು, ಭಾರತದಲ್ಲಿ ಯುಎಸ್ ಮಿಷನ್ ಹಾಗೂ ಅನುಷ್ಠಾನ ಪಾಲುದಾರ ಮೈಸೂರು ವಿಶ್ವವಿದ್ಯಾನಿಲಯವೂ ತನ್ನ ಮಾನಸ ಗಂಗೋತ್ರಿಯಲ್ಲಿರುವ ಜಯಲಕ್ಷ್ಮಿ ವಿಲಾಸ ಅರಮನೆ ಅಂದರೆ ಜಾನಪದ ವಸ್ತು ಸಂಗ್ರಹಾಲಯದ ನವೀಕರಣಕ್ಕೆ 30 ಕೋಟಿ ರೂಪಾಯಿ ಬೇಕಾಗಲಿದೆ.
ಪ್ರಾರಂಭಿಕವಾಗಿ 2.4 ಕೋಟಿ ವೆಚ್ಚದಲ್ಲಿ ಜಯಲಕ್ಷ್ಮಿ ವಿಲಾಸ ಅರಮನೆಯ ವೆಸ್ಟ್ ಸೈಡ್ ಮತ್ತು ಮ್ಯೂಸಿಯಂ ಅಭಿವೃದ್ಧಿ ಪಡಿಸಲು ಒಡಂಬಡಿಕೆಗೆ ಸಹಿ ಹಾಕಲಾಗಿದೆ. ಈ ಕೆಲಸವನ್ನು ಮೈಸೂರು ವಿಶ್ವವಿದ್ಯಾನಿಲಯದ ಅನುಮತಿಯ ಮೇರೆಗೆ ಶಾ ಫೌಂಡೇಶನ್ ಮತ್ತು ಡೆಕ್ಕನ್ ಹೆರಿಟೇಜ್ ಫೌಂಡೇಷನ್, ಯು.ಎಸ್ ಮಿಷನ್ ನ ಅನುದಾನದಲ್ಲಿ ನವೀಕರಣ ಕಾಮಗಾರಿಯನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು.
ಜಯಲಕ್ಷ್ಮಿ ವಿಲಾಸ ಅರಮನೆಯ ಇತಿಹಾಸ: ಜಯಲಕ್ಷ್ಮಿ ವಿಲಾಸ ಅರಮನೆ ಪಾರಂಪರಿಕ ಕಟ್ಟಡವಾಗಿದ್ದು. ಇದನ್ನು1905 ರಲ್ಲಿ ಮೈಸೂರು ಮಹಾರಾಜ ಚಾಮರಾಜ ಒಡೆಯರ್ ಅವರು ಹಿರಿಯ ಪುತ್ರಿ ಮಹಾರಾಜಕುಮಾರಿ ಜಯಲಕ್ಷ್ಮಿ ಅಮ್ಮಣ್ಣಿಯವರಿಗೆ ನಿರ್ಮಿಸಲಾಗಿತ್ತು. ಈ ಅರಮನೆ ಯುರೋಪಿಯನ್ ಶಾಸ್ತ್ರೀಯ ಶೈಲಿಯಲ್ಲಿ ವಿನ್ಯಾಸಗೊಳಿಸಿದ್ದು. ನಾಲ್ಕು ವಿಭಾಗಗಳನ್ನು ಹೊಂದಿದೆ.
1959ರಲ್ಲಿ ಕುವೆಂಪು ಅವರು ಉಪಕುಲಪತಿ ಆಗಿದ್ದ ಸಂದರ್ಭದಲ್ಲಿ ಈ ಅರಮನೆಯನ್ನು ಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ತೆಗೆದುಕೊಂಡು ಮಾನಸ ಗಂಗೋತ್ರಿ ಆವರಣವನ್ನಾಗಿ ಮಾಡಿದರು. ಬಳಿಕ 1969ರಲ್ಲಿ ಡಾ. ಜವರೇಗೌಡರು ಈ ಜಯಲಕ್ಷ್ಮಿ ವಿಲಾಸ ಅರಮನೆಯನ್ನು ಜಾನಪದ ವಸ್ತು ಸಂಗ್ರಹಾಲಯವನ್ನಾಗಿ ಮಾಡಿದರು.