ಮೈಸೂರು:ವಕೀಲರ ಸಂಘದ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆಯನ್ನು ಖಂಡಿಸಿ ವಕೀಲರ ಸಂಘ ಗಾಂಧಿ ಪ್ರತಿಮೆಯ ಮುಂದೆ ಇಂದು ಪ್ರತಿಭಟನೆ ನಡೆಸಿದೆ.
ಫ್ರೀ ಕಾಶ್ಮೀರ ಪ್ರಕರಣ: ಮೈಸೂರು ವಕೀಲರಿಂದ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ - ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ನಡೆಸಿದ ವಕೀಲರು
ಫ್ರೀ ಕಾಶ್ಮೀರ ಫಲಕವನ್ನು ಪ್ರದರ್ಶಿಸಿದ್ದ ನಳಿನಿ ಪರ ವಕೀಲರ ಸಂಘ ವಕಾಲತ್ತು ವಹಿಸಲು ಹಿಂದೆ ಸರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲರ ವಿರುದ್ಧ ಸಿದ್ದರಾಮಯ್ಯ ನೀಡಿದ್ದ ಹೇಳಿಕೆ ಖಂಡಿಸಿ ವಕೀಲರ ಸಂಘ ಪ್ರತಿಭಟನೆ ನಡೆಸಿದೆ.

ಪ್ರತಿಭಟನೆ
ಪ್ರತಿಭಟನ ನಡೆಸಿದ ವಕೀಲರ ಸಂಘ
ಗಂಗೋತ್ರಿ ಆವರಣದಲ್ಲಿ ಪ್ರತಿಭಟನೆ ವೇಳೆ ಫ್ರೀ ಕಾಶ್ಮೀರ ಫಲಕ ಪ್ರದರ್ಶಿಸಿದ್ದ ನಳಿನಿ ಪರ ವಕೀಲರ ಸಂಘ ವಕಾಲತ್ತು ವಹಿಸಲು ಹಿಂದೆ ಸರಿದಿತ್ತು. ಇದಕ್ಕೆ ಸಂಬಂಧಿಸಿದಂತೆ ನಿನ್ನೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಮೈಸೂರು ಬಾರ್ ಕೌನ್ಸಿಲ್ ಈ ನಿರ್ಧಾರ ತೆಗೆದುಕೊಂಡಿರುವುದು ಉದ್ಧಟತನ. ಕೂಡಲೇ ಈ ಬಹಿಷ್ಕಾರವನ್ನು ವಾಪಸ್ ಪಡೆಯಬೇಕು ಎಂದಿದ್ದರು.ಅಲ್ಲದೇ ಮೈಸೂರು ವಕೀಲರ ಬಗ್ಗೆ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಖಂಡಿಸಿ ಇಂದು ನ್ಯಾಯಲಯದ ಮುಂಭಾಗ ವಕೀಲರ ಸಂಘ ಪ್ರತಿಭಟನೆ ನಡೆಸಿತು.
Last Updated : Jan 23, 2020, 3:14 PM IST