ಮೈಸೂರು: ಲಾಕ್‌ಡೌನ್ ಸಂಪೂರ್ಣವಾಗಿ ಮುಗಿಯುವವರೆಗೆ ಬಾರ್ ಬಾಗಿಲು ತೆರೆಯಬಾರದು ಎಂದು ಒತ್ತಾಯಿಸಿ ಸ್ಥಳೀಯರು ಪ್ರತಿಭಟನೆ ನಡೆಸಿರುವ ಘಟನೆ ಜಿಲ್ಲೆಯ ಸುಣ್ಣದಕೇರಿಯಲ್ಲಿ ನಡೆದಿದೆ.
ಮೈಸೂರು ರೆಡ್ ಝೋನ್ನಲ್ಲಿದೆ, ದಯವಿಟ್ಟು 'ಬಾರ್' ಬಾಗಿಲು ತೆರೆಯುವುದು ಬೇಡ: ಸ್ಥಳೀಯರ ಒತ್ತಾಯ - Mysore is in the Red Zone
ಮೈಸೂರು ಜಿಲ್ಲೆ ಸಂಪೂರ್ಣ ರೆಡ್ ಝೋನ್ನಲ್ಲಿರುವುದರಿಂದ ಮತ್ತೆ ಸಮಸ್ಯೆಗಳು ಎದುರಾಗಲಿದ್ದು, ಕೊರೊನಾ ಸೋಂಕಿತರು ಸಂಪೂರ್ಣ ಗುಣಮುಖರಾಗುವವರೆಗೆ ಬಾರ್ ಬಾಗಿಲನ್ನು ತೆರೆಯದಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಮೈಸೂರು ರೆಡ್ಝೋನ್ನಲ್ಲಿದೆ ದಯವಿಟ್ಟು 'ಬಾರ್' ಬಾಗಿಲು ತೆರೆಯುವುದು ಬೇಡ
ಜಿಲ್ಲೆ ರೆಡ್ ಝೋನ್ನಲ್ಲಿರುವುದರಿಂದ ಮತ್ತೆ ಸಮಸ್ಯೆಗಳು ಎದುರಾಗಲಿದ್ದು, ಕೊರೊನಾ ಸೋಂಕಿತರು ಸಂಪೂರ್ಣ ಗುಣಮುಖರಾಗುವವರೆಗೆ ಹಾಗೂ ಲಾಕ್‌ಡೌನ್ ಸಂಪೂರ್ಣ ತೆರವುಗೊಳಿಸುವವರೆಗೂ ಬಾರ್ ತೆರೆಯಬಾರದು ಎಂದು ಆಗ್ರಹಿಸಿದ್ದಾರೆ.
ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು, ಸರ್ಕಾರದ ಸೂಚನೆಯಂತೆ ಬಾರ್‌ಗಳನ್ನು ತೆರೆಯಲಾಗುತ್ತಿದೆ. ಇದರಲ್ಲಿ ಬಾರ್ ಮಾಲೀಕರ ಪಾತ್ರವಿಲ್ಲವೆಂದು ತಿಳಿಹೇಳಿದರು. ಆದರೆ, ಇವರ ಮಾತಿಗೆ ಕಿಂಚಿತ್ತೂ ಯುವಕರು ಬೆಲೆ ಕೊಡದ ಕಾರಣ ಕೊನೆಗೆ ಠಾಣೆಗೆ ಕರೆದೊಯ್ಯಲಾಯಿತು.