ಕರ್ನಾಟಕ

karnataka

ETV Bharat / state

ವೈಭವದ ದಸರಾಕ್ಕೆ ಅದ್ಧೂರಿ ತೆರೆ : ಮರಳಿ ಸಹಜ ಸ್ಥಿತಿಯತ್ತ ಅರಮನೆ ನಗರಿ - ತೆರೆ ಕಂಡ ದಸರಾ

ಕಳೆದ ಕೆಲ ವಾರಗಳಿಂದ ದಸರಾ ಪ್ರಯುಕ್ತ ಗಿಜುಗುಡುತ್ತಿದ್ದ ಅರಮನೆ ನಗರಿ ಮೈಸೂರು ಇದೀಗ ಸಹಜ ಸ್ಥಿತಿಯತ್ತ ಮರಳುತ್ತಿದ್ದು, ನಗರದಲ್ಲಿ ಸ್ವಚ್ಚತೆಯ ಕಾರ್ಯ ಭರದಿಂದ ಸಾಗಿದೆ.

ಮೈಸೂರು

By

Published : Oct 9, 2019, 2:15 PM IST

ಮೈಸೂರು:ದಸರಾ ಆಚರಣೆ ಮುಕ್ತಾಯವಾದ ಬೆನ್ನಲ್ಲೇ ಕಳೆದ ಹತ್ತು ದಿನಗಳಿಂದ ಗಿಜುಗುಡುತ್ತಿದ್ದ ಮೈಸೂರು ಮಹಾನಗರ ಸಹಜ ಸ್ಥಿತಿಗೆ ಮರಳುತ್ತಿದೆ.

ಸಹಜ ಸ್ಥಿತಿಯತ್ತ ಅರಮನೆ ನಗರಿ

ನವರಾತ್ರಿ ಆಚರಣೆ ಹಿನ್ನೆಲೆ ರಾಜ್ಯ ಹಾಗೂ ದೇಶದ ವಿವಿಧೆಡೆಯಿಂದ ಸಾಕಷ್ಟು ಪ್ರವಾಸಿಗರು ಮೈಸೂರಿಗೆ ಆಗಮಿಸಿದ್ದರು. ನಿನ್ನೆ ರಾತ್ರಿ ವಿಜಯದಶಮಿ ಆಚರಣೆ ಸಮಾಪ್ತಿಯಾಗಿದ್ದು, ವೈಭವದ ದಸರಾ ವೀಕ್ಷಿಸಿ ಪ್ರವಾಸಿಗರು ತಮ್ಮ ತಮ್ಮ ಊರುಗಳಿಗೆ ಪ್ರಯಾಣ ಬೆಳೆಸಿದ್ದಾರೆ.

ನಿಗದಿತ ಜನಸಂಖ್ಯೆಗಿಂತ ಐದಾರು ಪಟ್ಟು ಹೆಚ್ಚು ಜನರನ್ನು ಈ ಹತ್ತು ದಿನ ಕಂಡ ಮೈಸೂರು ಮಹಾನಗರ ವಿಪರೀತ ಸಂಚಾರ ದಟ್ಟಣೆ, ಸ್ವಚ್ಛತೆಯಲ್ಲಿ ಅವ್ಯವಸ್ಥೆ, ದರ ಏರಿಕೆ ಇತ್ಯಾದಿ ಕಾರಣಗಳಿಂದ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಆದರೆ, ಈಗ ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತಿದೆ. ನವರಾತ್ರಿ ಹಿನ್ನೆಲೆ ಹೆಚ್ಚು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ಕಾರಣ ಹೆಚ್ಚಳವಾಗಿದ್ದ ಬೆಲೆಗಳು ಕಡಿಮೆಯಾಗಿವೆ. ಆಟೋಗಳು, ಹೋಟೆಲ್​ಗಳ ಆಹಾರ ದರ ಕಡಿಮೆಯಾಗಿದೆ. ತುಂಬಿ ತುಳುಕುತ್ತಿದ್ದ ಮೈಸೂರು ನಗರದ ಬಹುತೇಕ ಮಾರ್ಗಗಳು ಹಾಗೂ ವೃತ್ತಗಳು ಇದೀಗ ಸಾಕಷ್ಟು ನಿರಾಳವಾಗಿವೆ.

ಒಟ್ಟಾರೆ, ಮೈಸೂರು ಮಹಾನಗರ ಬಹುತೇಕ ಸಹಜ ಸ್ಥಿತಿಗೆ ಮರಳಿದ್ದು, ಸ್ವಚ್ಛತೆ ಕಾರ್ಯ ಕೂಡ ಭರದಿಂದ ಸಾಗಿದೆ. ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ನಾಗರಿಕರಿಂದ ಉಂಟಾಗುತ್ತಿದ್ದ ಸಮಸ್ಯೆ ಹಾಗೂ ಸ್ವಚ್ಛತೆ ನಿಭಾಯಿಸುವಲ್ಲಿ ಆಗಿದ್ದ ಹಿನ್ನಡೆಯನ್ನು ಮೈಸೂರು ಮಹಾನಗರ ಪಾಲಿಕೆ ಸ್ವಚ್ಛತಾ ಸಿಬ್ಬಂದಿ ಸರಿಪಡಿಸುವ ಪ್ರಯತ್ನ ಆರಂಭಿಸಿದೆ.

ABOUT THE AUTHOR

...view details