ಮೈಸೂರು: ದೇಶದಲ್ಲೇ ಸ್ವಚ್ಛ ನಗರಿ ಎಂದು ಖ್ಯಾತಿ ಪಡೆದ ಮೈಸೂರು ಜಿಲ್ಲೆ, ಸಾರ್ವಜನಿಕರ ಸಹಕಾರದೊಂದಿಗೆ ಇದೀಗ ಕಸ ಮುಕ್ತ ನಗರಿಯಾಗಿದೆ.
ಕಸ ಮುಕ್ತ ನಗರಿ ಹಿರಿಮೆಗೆ ಮೈಸೂರು ಸಾಕ್ಷಿ ಸಾಂಸ್ಕೃತಿಕ ಹಾಗೂ ಅರಮನೆಗಳ ನಗರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮೈಸೂರು, 3ರಿಂದ 10 ಲಕ್ಷ ಜನಸಂಖ್ಯೆ ಹೊಂದಿದ್ದು, ದೇಶದಲ್ಲೇ ಸ್ವಚ್ಛ ನಗರಿ ಎಂಬ ಹಿರಿಮೆ ಪಡೆದುಕೊಂಡಿದೆ. ಕಳೆದ ಎರಡು ಸಲ ಸ್ವಚ್ಛ ನಗರಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು.
ಕಸ ಮುಕ್ತ ನಗರಿ ಹಿರಿಮೆಗೆ ಮೈಸೂರು ಸಾಕ್ಷಿ ನಗರದ ಸ್ವಚ್ಛತೆಗೆ ಸಾರ್ವಜನಿಕರ ಸಹಕಾರವಿದ್ದು, ಪೌರ ಕಾರ್ಮಿಕರು ನಿತ್ಯವೂ ಬೆಳಗ್ಗೆ ಮತ್ತು ರಾತ್ರಿ ತಪ್ಪದೆ ಸ್ವಚ್ಛಗೊಳಿಸುತ್ತಾರೆ. 2,300ಕ್ಕೂ ಹೆಚ್ಚು ಪೌರ ಕಾರ್ಮಿಕರು ಮನೆಯ ಮುಂದೆ ಕಸದ ವಾಹನಗಳನ್ನು ತೆಗೆದುಕೊಂಡು ಹೋಗುತ್ತಾರೆ.
ಮನೆಯಿಂದಲೇ ಹಸಿ ಹಾಗೂ ಒಣ ಕಸ ವಿಗಂಡಿಸಿ, ಅದನ್ನು ದೊಡ್ಡ ಲಾರಿಗಳಲ್ಲಿ ತುಂಬಲಾಗುತ್ತದೆ. ಅಲ್ಲಿಂದ ನಗರದ ಹೊರ ಭಾಗಕ್ಕೆ ವಿಲೇವಾರಿ ಮಾಡಲಾಗುತ್ತದೆ. ನಗರದಲ್ಲಿ ಕಸದ ಸಮಸ್ಯೆ ಇಲ್ಲದೇ ಇರುವುದರಿಂದ ಸಾಂಕ್ರಾಮಿಕ ರೋಗಗಳ ಸಂಖ್ಯೆ ಕಡಿಮೆ ಎನ್ನುತ್ತಾರೆ ಸಾರ್ವಜನಿಕರು.
ಇನ್ನೂ ಲಾಕ್ಡೌನ್ ಸಂದರ್ಭದಲ್ಲಿ ನಗರ ಮತ್ತಷ್ಟು ಸ್ವಚ್ಛವಾಗಿದ್ದು, ಕಸ ಮುಕ್ತ ನಗರಿಯಾಗಿದೆ. ಪ್ರತಿ ದಿನ ಪೌರ ಕಾರ್ಮಿಕರ ಜೊತೆಗೆ ಪಾಲಿಕೆ ಅಧಿಕಾರಗಳ ತಂಡವೇ ಕಸ ವಿಲೇವಾರಿ ಕಾರ್ಯದಲ್ಲಿ ತೊಡಗುತ್ತದೆ. ಇಲ್ಲಿ ಹಲವಾರು ಸ್ವಚ್ಛ ಸರ್ವೇಕ್ಷಣೆ ಸ್ವಯಂ ಸೇವಾ ತಂಡಗಳ ಸಹಕಾರ ಆಂದೋಲನಗಳು ಹಾಗೂ ಪೌರ ಕಾರ್ಮಿಕರ ನಿಷ್ಠೆಯಿಂದ ಕೆಲಸ ಮಾಡಲಾಗುತ್ತಿದೆ ಎನ್ನುತ್ತಾರೆ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ.